ಪ್ರಮುಖ ಸುದ್ದಿಮೈಸೂರು

ಪ್ರೇಕ್ಷಕರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗುತ್ತಿದೆ ಸಾಂಸ್ಕೃತಿಕ ಕಾರ್ಯಕ್ರಮ

ದಿನಕರ ತನ್ನ ದಿನಿತ್ಯದ ಕೆಲಸ ಕಾರ್ಯಗಳನ್ನು ಪೂರೈಸಿ ಮರೆಗೆ ಜಾರುವ ಸಮಯ, ಪಕ್ಷಿಗಳು ಚಿಲಿಪಿಲಿಗುಟ್ಟುತ್ತ ತಮ್ಮ ಗೂಡು ಸೇರುತ್ತಿದ್ದರೆ ಮೈಸೂರಿನ ಜನತೆ ತಮ್ಮ ಗೂಡು ಬಿಟ್ಟು ಅರಮನೆ ಆವರಣದತ್ತ ದಾಪುಗಾಲು ಹಾಕುತ್ತಿದ್ದರು. ಎಲ್ಲರಿಗೂ ತಾವು ಬೇಗ ಅರಮನೆ ಆವರಣವನ್ನು ತಲುಪಿ ಸುಶ್ರಾವ್ಯ ಗೀತೆಗಳನ್ನು ತಮ್ಮ ಕರ್ಣಪಟಲಗಳಲ್ಲಿ ಬಂಧಿಸಿಡಬೇಕೆಂಬ ತವಕ ಹೆಚ್ಚಾಗಿತ್ತು.

ಕಾರಣವಿಷ್ಟೇ ಮೈಸೂರು ದಸರಾ ಉತ್ಸವ ಪ್ರಯುಕ್ತ ಅರಮನೆ ಆವರಣದಲ್ಲಿ ನಾಲ್ಕನೆ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಅಂತಹ ವಾತಾವರಣವನ್ನು ಸೃಷ್ಟಿಸಿತ್ತು.  ಬಿ.ಜಯಶ್ರೀಯವರು ತಮ್ಮ ಕಂಚಿನ ಕಂಠದಿಂದ ರಂಗಗೀತೆ ಹಾಡಿ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿದರು. ಅದಕ್ಕೆ ಅವರ ತಂಡದವರ ಸಹಕಾರವೂ ಇತ್ತು.

ಅಷ್ಟೇ ಅಲ್ಲ ಕೇರಳದ ದಕ್ಷಿಣವಲಯ ಸಾಂಸ್ಕೃತಿಕ ಕೇಂದ್ರದವರು ಪ್ರದರ್ಶಿಸಿದ ಮೋಹಿನಿಯಾಟ್ಟಂನ ಸೋಪಾನಲಾಸ್ಯಂ ಪ್ರೇಕ್ಷಕರ ಹೃದಯ ಕದ್ದರೆ, ವಿನಾಯಕ ತೊರವಿ, ಎಸ್.ಶಂಕರರ ಮತ್ತು ತಂಡದವರು ನಡೆಸಿಕೊಟ್ಟ ಜುಗಲ್ ಬಂದಿಗೆ ಪ್ರೇಕ್ಷಕರು ಮನಸೋತರು. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮವನ್ನು ತಮ್ಮತ್ತ ಸೆರೆ ಹಿಡಿದಿಡುವಲ್ಲಿ ಕಲಾವಿದರು ಯಶಸ್ವಿಯಾದರು.

Leave a Reply

comments

Related Articles

error: