ಮೈಸೂರು

ಆರ್‌ಟಿ ನಗರ ಬಡಾವಣೆ ನಿವೇಶನ ಹಂಚಿಕೆ: ಉಪಸಮಿತಿ ರಚನೆಗೆ ಮುಡಾ ಸಭೆಯಲ್ಲಿ ತೀರ್ಮಾನ

ಮೈಸೂರು, ಮೇ ೩೦: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ.ಧುವಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ಪ್ರಾಧಿಕಾರದ ಸಾಮಾನ್ಯ ಸಭೆ ನಡೆಯಿತು.
ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ೨೧ ತುಂಡುಜಾಗದ ಪ್ರಕರಣ ಮತ್ತು ವಿವಿಧ ಕಾರಣಗಳಿಂದ ಬದಲಿ ನಿವೇಶನ ಕೋರಿರುವ ೮ ಪ್ರಕರಣಗಳಲ್ಲಿ ಬದಲಿ ನಿವೇಶನ ನೀಡಬೇಕು. ಆರ್.ಟಿ.ನಗರ ಬಡಾವಣೆಯ ನಿವೇಶನ ಹಂಚಿಕೆ ಬಗ್ಗೆ ಉಪ ಸಮಿತಿ ರಚನೆ, ವಿಶೇಷ ಪಾರಂಪರಿಕ ಸಮಿತಿಗೆ ವಾಸ್ತು ಶಿಲ್ಪಿ ತಜ್ಞ ಮತ್ತು ಸ್ಟ್ರಕ್ಚರಲ್ ಇಂಜಿನಿಯರ್‌ಗಳನ್ನು ನಾಮ ನಿರ್ದೇಶನ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ವಿಧಾನ ಪರಿಷತ್ ಉಪ ಸಭಾಪತಿ ಮರಿತಿಬ್ಬೇಗೌಡ, ಶಾಸಕರಾದ ಜಿ.ಟಿ.ದೇವೇಗೌಡ, ಎಂ.ಕೆ.ಸೋಮಶೇಖರ್, ವಾಸು, ವಿಧಾನಪರಿಷತ್ ಸದಸ್ಯರಾದ ಸಂದೇಶ್ ನಾಗರಾಜು, ಕೆ.ಟಿ.ಶ್ರೀಕಂಠೇಗೌಡ, ಆರ್.ಧರ್ಮಸೇನ, ಪಾಲಿಕೆ ಸದಸ್ಯ ಸಂದೇಶ್‌ಸ್ವಾಮಿ, ಮುಡಾ ಆಯುಕ್ತ ಡಾ.ಎಂ.ಮಹೇಶ್, ನಗರ ಪಾಲಿಕೆ ಆಯುಕ್ತ ಜಿ.ಜಗದೀಶ್, ನಗರ ಯೋಜನಾ ಸದಸ್ಯ ಎಂ.ಸಿ.ಶಶಿಕುಮಾರ್, ಪ್ರಾಧಿಕಾರದ ಅಧೀಕ್ಷಕ ಅಭಿಯಂತರ ಶಿವಕುಮಾರ್, ಎನ್.ನರಸಿಂಹೇಗೌಡ, ಕಾರ್ಯಪಾಲಕ ಅಭಿಯಂತರ ಸಿ.ಎನ್.ಕರಿಯಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: