ಸುದ್ದಿ ಸಂಕ್ಷಿಪ್ತ

ಜೆ.ಎಸ್.ಎಸ್.ಸಂಗೀತಾ ಸಭಾ ವಾರ್ಷಿಕೋತ್ಸವ ಹಾಗೂ ಬಸವ ಜಯಂತಿ ಸಂಗೀತೋತ್ಸವ ಜೂ.3 ಮತ್ತು 4ರಂದು

ಮೈಸೂರು.ಮೇ.30 : ಜೆ.ಎಸ್.ಎಸ್. ಸಂಗೀತಾ ಸಭಾ ಟ್ರಸ್ಟ್ ವಾರ್ಷಿಕೋತ್ಸವದಂಗವಾಗಿ ಬಸವ ಜಯಂತಿ ಸಂಗೀತೋತ್ಸವವನ್ನು ಜೂನ್ 3 ಮತ್ತು 4ರಂದು ಸಂಜೆ 6 ಗಂಟೆಗೆ ಸರಸ್ವತಿಪುರಂನಲ್ಲಿರುವ ಜೆ.ಎಸ್.ಎಸ್. ಪ್ರಾಥಾಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಜೂ.3ರಂದು ಡಾ.ಎಂ.ಎಸ್.ಭಾಸ್ಕರ್ ಅವರಿಂದ ಹಿಂದೂಸ್ತಾನಿ ಸಂಗೀತ, ವೀರಭದ್ರಯ್ಯ (ಹಾರ್ಮೋನಿಯಂ) ರಮೇಶ್ ಧನ್ನರ್ (ತಬಲಾ) ಸಾಥ್ ನೀಡುವರು,

ಜೂ.4ರಂದು ಬೆಂಗಳೂರಿನ ಹೆಮ್ಮಿಗೆ ಎಸ್.ಪ್ರಶಾಂತ್ ಅವರಿಂದ ಕರ್ನಾಟಿಕ್ ಸಂಗೀತ ಗಾಯನ ಕಚೇರಿಯೂ ನಡೆಯಲಿದೆ. ಶ್ರೀನಿಧಿ (ವಯೋಲಿನ್) ಬಿ.ಎಸ್.ಪ್ರಶಾಂತ್ ಹಾಗೂ ಅನಿಲ್ ಪರಾಶರ ಖಂಜಿರ (ಮೃದಂಗ) ಸಹಯೋಗ ನೀಡುವರು. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕಾರ್ಯದರ್ಶಿ ಕೆ.ರಾಮಮೂರ್ತಿ ರಾವ್ ಕೋರಿದ್ದಾರೆ (ಕೆ.ಎಂ.ಆರ್)

Leave a Reply

comments

Related Articles

error: