ಮೈಸೂರು

ರಂಗಭೂಮಿ ಕಲಾವಿದ ಪ್ರೊ. ಪ್ರಭಾಕರ್ ಸಾತ್‍ಖೇಡ್‍ ಅವರಿಗೆ ಸನ್ಮಾನ

lavani-1ರಂಗಾಯಣದ ಭೂಮಿಗೀತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಬುರ್ಗಿಯ ರಂಗಭೂಮಿ ಕಲಾವಿದ ಮತ್ತು ಅರ್ಥಶಾಸ್ತ್ರ ಪ್ರೊಫೆಸರ್ ಪ್ರಭಾಕರ್‍ ಸಾತ್‍ಖೇಡ್‍ ಅವರನ್ನು ಸನ್ಮಾನಿಸಲಾಯಿತು.

ಪ್ರಭಾಕರ್‍ ಅವರ ರಂಗಭೂಮಿ ಸಾಧನೆಯನ್ನು ಗಮನಿಸಿ ರಂಗಾಯಣ ಆಯೋಜಿಸಿದ್ದ ನವರಾತ್ರಿ ರಂಗೋತ್ಸವ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಬಳಿಕ ಮಾತನಾಡಿದ ಪ್ರಭಾಕರ್‍ ಸಾತ್‍ಖೇಡ್‍ ಅವರು, ನಮಗೆ ಬ್ರಿಟಿಷರನ್ನು ಬೈಯ್ಯಲು ಹಲವು ಕಾರಣಗಳಿವೆ. ಆದರೆ, ರಂಗಭೂಮಿಯನ್ನು ಪ್ರೀತಿಸುವುದನ್ನು ನಾವು ಅವರಿಂದ ಕಲಿಯಬೇಕು. ಲಂಡನ್‍ವೊಂದರಲ್ಲೇ ನೂರಕ್ಕೂ ಹೆಚ್ಚು ರಂಗಭೂಮಿಗಳಿವೆ. ಆದರೆ, ಕರ್ನಾಟಕದಲ್ಲಿ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಮಾತ್ರ ಬೆರಳೆಣಿಕೆಯ ರಂಗಭೂಮಿಗಳಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನವರಾತ್ರಿ ಹಬ್ಬದ ಸಮಯದಲ್ಲಿ ಸನ್ಮಾನ ಸ್ವೀಕರಿಸಿದ್ದು ಬಹಳ ಸಂತಸ ತಂದಿದೆ ಎಂದು ಅವರು ತಿಳಿಸಿದರು.

ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಸಂಯೋಜಕ ವಿನಾಯಕ ಭಟ್ ಹಸನಗಿ, ಕೃಷ್ಣಪ್ರಸಾದ್ ಮತ್ತು ಇತರರು ಉಪಸ್ಥಿತರಿದ್ದರು.

ಸನ್ಮಾನ ಕಾರ್ಯಕ್ರಮಕ್ಕೂ ಮೊದಲು ಮಹಾರಾಷ್ಟ್ರದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಿಂದ ನಡೆದ ಲಾವಣಿ ನೃತ್ಯ ನೋಡುಗರ ಮನಸೆಳೆಯಿತು.

 

Leave a Reply

comments

Related Articles

error: