ಸುದ್ದಿ ಸಂಕ್ಷಿಪ್ತ

ರಾಜ್ಯಮಟ್ಟದ ವಿಚಾರ ಸಂಕಿರಣ ಸಮಾರೋಪ ಸಮಾರಂಭ ಮೇ.31ಕ್ಕೆ

ಮೈಸೂರು.ಮೇ.30 : ಬೆಂಗಳೂರಿನ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ಹಾಗೂ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವೂ ಪರಿಶಿಷ್ಟ ಪಂಗಡಗಳ ಸಂಶೋಧಾ ವಿದ್ಯಾರ್ಥಿಗಳಿಗಾಗಿ  “Recent advancement in History and archaeology” ಎಂಬ ಶೀರ್ಷಿಕೆಯಡಿ ನಡೆಯುತ್ತಿರುವ ರಾಜ್ಯಮಟ್ಟದ ವಿಚಾರ ಸಂಕಿರಣದ ಸಮಾರೋಪ ಸಮಾರಂಭವೂ ಮೇ.31ರ ಸಂಜೆ 4ಕ್ಕೆ ಮಾನಸ ಗಂಗೋತ್ರಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಲ್ಲಿ ನಡೆಯಲಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ, ಶಾಸನಶಾಸ್ತ್ರ ವಿಭಾಗದ ನಿರ್ದೇಶಕ ಡಾ.ಡಿ.ಎಂ.ನಾಗರಾಜು ಸಮಾರೋಪ ನುಡಿಗಳನ್ನಾಡುವರು.

ಪ್ರಾಚ್ಯ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಉಪನಿರ್ದೇಶಕ ಡಾ.ಗವಿಸಿದ್ದಯ್ಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕುಲಸಚಿವ ಪ್ರೊ.ಆರ್.ರಾಜಣ್ಣ, ವಿಭಾಗದ ನಿವೃತ್ತ ಕ್ಯೂರೇಟರ್ ಡಾ.ದಯಾನಂದ ಪಟೇಲ್, ವಿಭಾಗದ ಅಧ್ಯಕ್ಷೆ ಡಾ.ವಿ.ಶೋಭಾ, ಸಹಾಯಕ ಪ್ರಾಧ್ಯಾಪಕ ಡಾ.ಕೆ.ಪ್ರಭು ಹಾಗೂ ಇತರರು ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: