ದೇಶಪ್ರಮುಖ ಸುದ್ದಿಮನರಂಜನೆ

ನರೇಂದ್ರ ಮೋದಿಯನ್ನು ಜರ್ಮನಿಯಲ್ಲಿ ಭೇಟಿಯಾದ ಪ್ರಿಯಾಂಕಾ ಛೋಪ್ರಾ

ದೇಶ(ನವದೆಹಲಿ) ಮೇ.30:- ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಜರ್ಮನಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ ಪ್ರಿಯಾಂಕಾ ‘ನರೇಂದ್ರ ಮೋದಿ ಸರ್ ಭೇಟಿಯಾಗಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು, ಒಂದೇ ಸಮಯದಲ್ಲಿ ಇಬ್ಬರೂ ಬರ್ಲಿನ್ ಗೆ ಬಂದಿರುವುದು ಕಾಕತಾಳೀಯವಾಗಿದ್ದು ಭೇಟಿಗೆ ಸಾಧ್ಯವಾಯಿತು’ ಎಂದಿದ್ದಾರೆ. ಅಷ್ಟೇ ಅಲ್ಲದೇ ಅವರ ಜೊತೆ ತೆಗೆಸಿಕೊಂಡ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತನ್ನ ಪ್ರಥಮ ಹಾಲಿವುಡ್ ಫಿಲ್ಮ್ ‘ಬೇವಾಚ್’ ಪ್ರಮೋಶನ್ ಗಾಗಿ ಅಲ್ಲಿ ಹೋಗಿದ್ದಾರಂತೆ. ಭಾರತದಲ್ಲಿ ಶುಕ್ರವಾರ ಬೇವಾಚ್ ತೆರೆ  ಕಾಣಲಿದೆ. ಇದರಿಂದ ಪ್ರಿಯಾಂಕಾ ತುಂಬಾ ಉತ್ಸುಕರಾಗಿದ್ದಾರೆ. ಈಗಾಗಲೇ ಚಿತ್ರ ಅಮೇರಿಕಾ ಮತ್ತು ಯುರೋಪ್ ಸೇರಿದಂತೆ ಹಲವು ದೇಶಗಳಲ್ಲಿ ತೆರೆ ಕಂಡಿದೆ.

ಚಿತ್ರದಲ್ಲಿ ಪ್ರಿಯಾಂಕಾ ಕ್ಯಾರೆಕ್ಟರ್ ತುಂಬಾ ಬೋಲ್ಡ್ ಆಗಿದೆ ಎನ್ನಲಾಗುತ್ತಿದೆ. ಇಂಗ್ಲಿಷ್ ಭಾಷೆ ಸೇರಿದಂತೆ ಹಿಂದಿ, ತಮಿಳು,ತೆಲುಗು ಭಾಷೆಯಲ್ಲಿಯೂ ಚಿತ್ರ ತೆರೆ ಕಾಣಲಿದೆ. ಸೆನ್ಸಾರ್ ಮಂಡಳಿಯು ‘ಎ’ ಸರ್ಟಿಫಿಕೇಟ್ ನೀಡಿದೆ. ಚಿತ್ರದಲ್ಲಿ ಪ್ರಸಿದ್ಧ ನಟ ದಿ ರಾಕ್ ಡವೆನ್ ಜಾನ್ಸನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಜಾನ್ಸನ್ ಫೇಸ್ ಬುಕ್ ನಲ್ಲಿ ಪ್ರಿಯಾಂಕಾರ ಕಾರ್ಯವೈಖರಿಯನ್ನು ಈಗಾಗಲೇ ಹೊಗಳಿದ್ದಾರೆ. (ವರದಿ:ಎಸ್.ಎಚ್)

Leave a Reply

comments

Related Articles

error: