ಮೈಸೂರು

ದ್ವಿಚಕ್ರವಾಹನಕ್ಕೆ ಹಿಂಬದಿಯಿಂದ ಗುದ್ದಿದ ಕಾರು : ದೂರು ದಾಖಲು

ಮೈಸೂರು,ಮೇ.31:- ತನ್ನ ಮಗಳನ್ನು ದ್ವಿಚಕ್ರವಾಹನದಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ವೇಗವಾಗಿ ಚಲಾಯಿಸಿಕೊಂಡು ಬಂದ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ  ಮಗಳು ವಾಹನದಿಂದ ಕೆಳಗೆ ಬಿದ್ದಿದ್ದು, ಚಾಲಕ ವಾಹನ ನಿಲ್ಲಿಸಿದೇ ಪರಾರಿಯಾಗಿದ್ದಾನೆ ಎಂದು ವ್ಯಕ್ತಿಯೋರ್ವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಹದೇವ ಎಂಬವರು ಮೇ.22ರಂದು ರಾತ್ರಿ 8.30ರ ಸುಮಾರಿಗೆ  ಆರೋಗ್ಯ ಸರಿ ಇಲ್ಲದ ಕಾರಣ ಧನ್ವಂತರಿ ಕ್ಲಿನಿಕ್‌ಗೆ ಹೋಗಿ ತೋರಿಸಲು ಟಿವಿಎಸ್‌ ಜುಪಿಟರ್‌ ಸ್ಕೂಟರ್‌ ನಂ. ಕೆಎ-09-ಹೆಚ್‌‌ಎಲ್‌‌-6719 ರಲ್ಲಿ ಹಿಂಭಾಗ ಮಗಳಾದ ಮಮತ ರನ್ನು ಕೂರಿಸಿಕೊಂಡು ಬೋಗಾದಿ ಬ್ಯಾಂಕ್‌ ಕಾಲೋನಿಯ ರಸ್ತೆಯ ಹತ್ತಿರ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಕಾರ್‌ ನಂ. ಕೆಎ-09-ಎಂಬಿ-1429 ರ ಚಾಲಕ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಹಿಂಬದಿಯಿಂದ ಡಿಕ್ಕಿ ಮಾಡಿದ ಪರಿಣಾಮ ನಾನು ಮತ್ತು ಮಗಳು ಕೆಳಗೆ ಬಿದ್ದರೂ ಕಾರು ಚಾಲಕ ಕಾರನ್ನು ನಿಲ್ಲಿಸದೆ ಹೊರಟು ಹೋಗಿದ್ದಾನೆ. ಈ ಅಪಘಾತಕ್ಕೆ ಕಾರಣನಾದ ಕಾರು ಮತ್ತು ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೆ.ಆರ್.ಸಂಚಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: