ಮೈಸೂರು

‘ಬೆಂದಕಾಳೂರು ಆನ್ ಟೋಸ್ಟ್’ ನಾಟಕ ಪ್ರದರ್ಶನ

ಮೈಸೂರಿನ ಸೇಂಟ್ ಫಿಲೋಮಿನಾ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳು ಕಲಾಮಂದಿರದಲ್ಲಿರುವ ರಂಗಾಯಣದ ಭೂಮಿಗೀತದಲ್ಲಿ ಮಂಗಳವಾರ ಸಂಜೆ  ‘ಬೆಂದ ಕಾಳು ಆನ್ ಟೋಸ್ಟ್’ ಎಂಬ ನಾಟಕ ಪ್ರದರ್ಶಿಸಿದರು.
ನಾಟಕದಲ್ಲಿ ರಾಜ ವೀರಬಲ್ಲಾಳ ಬೇಟೆಗಾಗಿ ತೆರಳಿದ್ದಾಗ, ಕಾಡಿನ ಮಧ್ಯೆ ದಾರಿ ತಪ್ಪುತ್ತಾನೆ. ತೀವ್ರ ಹಸಿವಿನಿಂದ ಓಡಾಡುತ್ತಿದ್ದ ಈತನನ್ನು ಕಂಡ ವೃದ್ಧೆಯೊಬ್ಬರು ಬೆಂದಕಾಳನ್ನು ನೀಡುತ್ತಾರೆ. ಆಕೆ ತನಗೆ ಸಹಾಯ ಮಾಡಿದ ನೆನೆಪಿಗಾಗಿ ವೀರಬಲ್ಲಾಳ ಆ ಸ್ಥಳಕ್ಕೆ ‘ಬೆಂದಕಾಳೂರು’ ಎಂದು ಹೆಸರಿಡುತ್ತಾನೆ.

ಕಾಲ ಕಳೆದಂತೆ ನಗರೀಕರಣಗೊಂಡ ಈ ಊರಿಗೆ ‘ಬೆಂಗಳೂರು’ ಎಂಬ ಹೆಸರು ಬರುತ್ತದೆ.

ಈ ನಾಟಕವು ನಗರದ ಜೀವನ ಶೈಲಿ ಮತ್ತು ವಾಸ್ತವ ಸ್ಥಿತಿಯನ್ನು ಎಳೆಎಳೆಯಾಗಿ ತೋರಿಸಿದ್ದಲ್ಲದೆ, ವಿಶ್ವದಲ್ಲೆಡೆ ಜನ ಎಷ್ಟು ಸ್ವಾರ್ಥಿಗಳಾಗಿರುತ್ತಾರೆ ಎಂಬುದನ್ನು ಪ್ರದರ್ಶಿಸಿತು.

ಈ ನಾಟಕವನ್ನು ಅಮಿತ್ ಜೆ ರೆಡ್ಡಿ ನಿರ್ದೇಶಿಸಿ, ಡಾ. ಬಸವರಾಜ್ ಸಂಯೋಜಿಸಿದ್ದರು.

 

 

 

 

 

 

 

 

Leave a Reply

comments

Related Articles

error: