ಕರ್ನಾಟಕಪ್ರಮುಖ ಸುದ್ದಿ

ಪಾರ್ವತಮ್ಮನವರು ಧೀಶಕ್ತಿ ಇದ್ದ ಮಹಿಳೆ : ಹಿರಿಯ ನಟಿ ಲೀಲಾವತಿ ಅವರಿಂದ ಗುಣಗಾನ

ರಾಜ್ಯ (ಪ್ರಮುಖ ಸುದ್ದಿ) ಬೆಂಗಳೂರು, ಮೇ 31 : “ಪಾರ್ವತಮ್ಮ ರಾಜ್ ಕುಮಾರ್ ಅವರು ಓರ್ವ ಧೀಮಂತ ಮಹಿಳೆ, ಆಧುನಿಕ ಕಿತ್ತೂರು ಚೆನ್ನಮ್ಮ” ಎಂದು ಹಿರಿಯ ನಟಿ ಲೀಲಾವತಿಯವರು ಹೇಳಿದ್ದಾರೆ. ಇಂದು ಬೆಳಗ್ಗೆ ಪಾರ್ವತಮ್ಮ ನವರು ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಧಾವಿಸಿ ಬಂದ ಲೀಲಾವತಿ ಮತ್ತು ಅವರ ಪುತ್ರ ವಿನೋದ್ ರಾಜ್ ಅವರು ಅಂತಿಮ ಗೌರವ ಸಲ್ಲಿಸಿದರು.

ನಂತರ ‘ಪಬ್ಲಿಕ್ ಟೀವಿ’ಗೆ ಸಂದರ್ಶನ ನೀಡಿದ ಲೀಲಾವತಿ ಅವರು ಪಾರ್ವತಮ್ಮನವರ ಧೀಶಕ್ತಿಯ ಬಗ್ಗೆ ಗುಣಗಾನ ಮಾಡಿದರು. “ಪಾರ್ವತಮ್ಮನವರು ಓರ್ವ ಧೈರ್ಯಶಾಲಿ ಮಹಿಳೆ. ಅವರ ಧೈರ್ಯ ನಮಗೆ ಬರಲು ಸಾಧ್ಯವಿಲ್ಲ. ಚಿಕ್ಕ ಮಕ್ಕಳು ಮತ್ತು ಮುಗ್ಧ ಗಂಡನನ್ನು ಕಟ್ಟಿಕೊಂಡು ಕುಟುಂಬವನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸಿದ್ದು ಸುಲಭದ ಸಾಧನೆಯಲ್ಲ. ಅವರು ಒಬ್ಬ ಧೀಮಂತ ಮಹಿಳೆ” ಎಂದು ಕೊಂಡಾಡಿದರು.

“ಕಿತ್ತೂರು ಚೆನ್ನಮ್ಮನ ಶೌರ್ಯ-ಕಾಳಜಿಯನ್ನು ಎಲ್ಲರೂ ಹಾಡಿ ಹೊಗಳುತ್ತಾರೆ. ನನ್ನ ಅಭಿಪ್ರಾಯದಲ್ಲಿ ಚೆನ್ನಮ್ಮನವರನ್ನು ಸರಿಗಟ್ಟುವ ಧೈರ್ಯತನ, ಕುಟುಂಬ ಕಾಳಜಿಯನ್ನು ಪಾರ್ವತಮ್ಮ ತೋರಿದ್ದಾರೆ. ಇದರ ಜೊತೆಗೆ ಚಿತ್ರರಂಗದ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿದವರು. ಜನ ಕಿತ್ತೂರು ಚೆನ್ನಮ್ಮನ ಪ್ರತಿಮೆ ಮಾಡಿ ಶೌರ್ಯ ಕೊಂಡಾಡುತ್ತಾರೆ. ಚೆನ್ನಮ್ಮನವರಂತೆ ಪಾರ್ವತಮ್ಮನವರ ಪ್ರತಿಮೆ ನಿರ್ಮಾಣ ಮಾಡಿದರೆ ಸೂಕ್ತ” ಎಂದು ಹೇಳುವ ಮೂಲಕ ತಮ್ಮ ಭಾವಪೂರ್ಣ ಗೌರವ ಸಲ್ಲಿಸಿದರು.

ಸ್ನೇಹವೂ ಇಲ್ಲ – ದ್ವೇಷವೂ ಇಲ್ಲ :

ಪಾರ್ವತಮ್ಮನವರ ಜೊತೆ ನನಗೆ ಅಷ್ಟೋಂದು ಸ್ನೇಹವೂ ಇರಲಿಲ್ಲ. ಆದರೆ ದ್ವೆಷವೂ ಇರಲಿಲ್ಲ. ಅವರಿಗೆ ನಾನು ಎಂದೂ ಕೇಡು ಬಯಸಲಿಲ್ಲ, ಅವರಿಗೆ ಹಿಂಸೆಯಾಗುವ ಕೆಲಸವನ್ನು ನಾನು ಎಂದೂ ಮಾಡಿಲ್ಲ. ನನ್ನನ್ನೂ ಅವರು ಒಳ್ಳೆಯ ರೀತಿಯಲ್ಲೇ ಕಂಡಿದ್ದಾರೆ ಎಂದು ಪಾರ್ವತಮ್ಮನವರ ಜೊತೆಗಿನ ತಮ್ಮ ಸಂಬಂಧದ ಕುರಿತು ಮೆಲುಕು ಹಾಕಿದರು.

-ಎನ್.ಬಿ.ಎನ್.

Leave a Reply

comments

Related Articles

error: