ಪ್ರಮುಖ ಸುದ್ದಿಮೈಸೂರು

ಜಿಲ್ಲೆಯಲ್ಲಿ ಮೂರು ದಿನ ಮಳೆ ಇಲ್ಲ

ಮೈಸೂರು ದಸರಾ ಉತ್ಸವದ ಆಚರಣೆಯಲ್ಲಿದೆ.  ಜನರು ನಗರದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಗ್ನರಾಗಿದ್ದಾರೆ. ಈ ವಾರ ಮೈಸೂರು ಜಿಲ್ಲೆಯಲ್ಲಿ ಮಳೆಯ ಮುನ್ಸೂಚನೆ ಇಲ್ಲ. ಅಕ್ಟೋಬರ್ 5ರಿಂದ 7ರವರೆಗೆ ಜಿಲ್ಲೆಯಲ್ಲಿ ಮಳೆಯಾಗುವ ಲಕ್ಷಣಗಳಿಲ್ಲ.

ನಾಗನಹಳ್ಳಿ ಸಂಶೋಧನಾ ಕೇಂದ್ರದ ಹೇಳಿಕೆಯ ಅನುಸಾರ  ಜಿಲ್ಲೆಯಲ್ಲಿ ದಿನದ ಉಷ್ಙಾಂಶ 31ಡಿಗ್ರಿ ಸೆಲ್ಶಿಯಸ್ ಮತ್ತು ರಾತ್ರಿಯ ಉಷ್ಣಾಂಶ 17ಡಿಗ್ರಿ ಸೆಲ್ಶಿಯಸ್ ನಿರೀಕ್ಷಿಸಬಹುದು. ಬೆಳಗಿನ ತೇವಾಂಶ 97-98 ಪರ್ಸೆಂಟ್ ಮಧ್ಯಾಹ್ನದ ಬಳಿಕ 53-57 ಪರ್ಸೆಂಟ್  ನಿರೀಕ್ಷೆಯಿದೆ. ಗಾಳಿಯ ವೇಗ ಗಂಟೆಗೆ 3ರಿಂದ 5ಕಿಮೀ.

ರೈತರಿಗೆ ಸಲಹೆಗಳು: ಮೋಡ ಕವಿದ ವಾತಾವರಣವಿದ್ದು  ಭತ್ತದ ಬೆಳೆಗೆ ರೋಗ ತಗಲುವ ಸಾಧ್ಯತೆ ಇರುವುದರಿಂದ ಅದನ್ನು ತಪ್ಪಿಸಲು ಒಂದು ಲೀಟರ್ ನೀರಿಗೆ 0.6ಗ್ರಾಂ ಟ್ರೈಸಿಕ್ಲೋವ್ಜಲ್ ದ್ರಾವಣವನ್ನು ಸಿಂಪಡಿಸಬಹುದು.

ಹವಾಮಾನ ಮುನ್ಸೂಚನೆ  (ಅಕ್ಟೋಬರ್ 5ರಿಂದ 7, 2016)

 

ಪಾರಾಮೀಟರ್05.10.201606.10.201607.10.2016
ಮಳೆ(ಮಿ.ಮೀಗಳಲ್ಲಿ)002
ಗರಿಷ್ಠ ಉಷ್ಣಾಂಶ ಡಿ.ಸೆ.313131
ಕನಿಷ್ಠ ಉಷ್ಣಾಂಶ ಡಿ.ಸೆ171717
ಆಕಾಶದ ಸ್ಥಿತಿಗತಿ423
ತೇವಾಂಶ(%)0830ಗಂಟೆಗಳಲ್ಲಿ979798
ತೇವಾಂಶ(%)1730ಗಂಟೆಗಳಲ್ಲಿ535457
ಗಾಳಿಯ ವೇಗ553
ಗಾಳಿಯ ದಿಕ್ಕು250250250

Leave a Reply

comments

Related Articles

error: