ದೇಶಪ್ರಮುಖ ಸುದ್ದಿ

ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ : ರಾಜಸ್ಥಾನ ಹೈಕೋರ್ಟ್

ದೇಶ(ಜೈಪುರ)ಮೇ.31:- ರಾಜಸ್ಥಾನ್ ಹೈಕೋರ್ಟ್ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ಎಂದು ಸರ್ಕಾರಕ್ಕೆ ಹೇಳಿದೆ.  ಅಷ್ಟೇ ಅಲ್ಲದೇ ಗೋವನ್ನು ವಧಿಸುವ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದಿದೆ.

ಹಿಂಗೋನಿಯಾ ಗೋಶಾಲೆ ಕುರಿತ ತೀರ್ಪು ನೀಡುವ ವೇಳೆ ಈ ವಿಷಯ ಪ್ರಸ್ತಾಪಿಸಿದ್ದು, ಹೈಕೋರ್ಟ್ ನ್ಯಾಯಾಧೀಶ ಮಹೇಶ್ ಚಂದ್ರ ಶರ್ಮಾ ಮಾತನಾಡಿ ಭ್ರಷ್ಟಾಚಾರ ನಿಗ್ರಹ ದಳ ಪ್ರತಿ ಮೂರು ತಿಂಗಳಿಗೊಮ್ಮೆ ಗೋಶಾಲೆಗಳ ಕುರಿತು ವರದಿ ತಯಾರಿಸಬೇಕು. ಮುನ್ಸಿಪಲ್ ಕಮೀಷನರ್ ಮತ್ತು ಇತರ ಅಧಿಕಾರಿಗಳು ಪ್ರತಿ ತಿಂಗಳು ಗೋಶಾಲೆಗೆ ತೆರಳಿ ಪರಿಶೀಲನೆ ನಡೆಸಬೇಕು. ಅರಣ್ಯ ಇಲಾಖೆಯು ಪ್ರತಿ ವರ್ಷ 5000 ಗಿಡಗಳನ್ನು ಬೆಳೆಸಬೇಕು ಎಂದರು.

ಕೇಂದ್ರ ಸರ್ಕಾರ ಗೋ ಹತ್ಯೆ ಹಾಗೂ ಮಾರಾಟ  ನಿಷೇಧ ಮಾಡುತ್ತಿದ್ದಂತೆ ಕೇರಳ ಮತ್ತು ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿವೆ ಎಂಬ ಮಾತುಗಳು ಕೋರ್ಟ್ ಆವರಣದಲ್ಲಿ ಕೇಳಿ ಬಂದಿದೆ. (ಎಸ್.ಎಚ್)

Leave a Reply

comments

Related Articles

error: