ಮೈಸೂರು

‘ಮೋಡಿ ಮಾಡಿದ ರಘು ದೀಕ್ಷಿತ್’ : ಹುಚ್ಚೆದ್ದು ಕುಣಿದ ಯುವ ಸಮೂಹ

ಶಿಶುನಾಳ ಷರೀಪರ ‘ಲೋಕದ ಕಾಳಜಿ ಮಾಡುತ್ತೀನಂತಿ ನಿಂಗ್ಯಾರೂ ಬ್ಯಾಡಂತಾರ  ಮಾಡಪ್ಪ ಚಿಂತಿ’… ರಘು ದೀಕ್ಷಿತರ ಈ ಹಾಡಿಗೆ ಹಿಮ್ಮೇಳಕ್ಕೆ ಕಾಲುಗಳು ನಿಯಂತ್ರಣಕ್ಕೆ ನಿಲ್ಲದೆ ಹೆಜ್ಜೆ ಹಾಕಲು ಶುರುವಿಟ್ಟು ಎಲ್ಲಾ ವಯೋಮಾನದ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿ ಕುಣಿಸಿದರು. ಪಾಶ್ಚಿಮಾತ್ಯ ಮತ್ತು ದೇಶಿ ಶೈಲಿಯ ವಿಭಿನ ಸಂಗೀತ ಸಂಯೋಜನೆ ಗಾಯನ ಶೈಲಿಯಿಂದಲೇ ಖ್ಯಾತರಾಗಿರುವ ರಘು ದೀಕ್ಷಿತ್  ಗಾಯನ ಕೇಳಲು ಇಡೀ ಮೈಸೂರೇ ನೆರೆದಿದ್ದಂತೆ ಭಾಸವಾಯಿತು.

ದಸರಾ ಮಹೋತ್ಸವದ ಪ್ರಮುಖ ಅಂಗವಾದ ಯುವ ದಸರಾದ ನಾಲ್ಕನೆ ದಿನದಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ರಘು ದೀಕ್ಷಿತ್ ಗಾನಸುಧೆಗೆ ಕಾಲು-ಕೈಗಳು ಕುಂತಲ್ಲಿ ಕೂರದೆ ನಿಂತಲ್ಲಿ ನಿಲ್ಲದೆ ನೃತ್ಯ ಮಾಡಲಾರಂಭಿಸಿದವು. ಹಿಂದೆಯೊಂದಿಗೆ ಗಾಯನ ಆರಂಭಿಸಿದ ನಂತರ ಕನ್ನಡ ಹಾಡುಗಳಿಗೆ ಪ್ರೇಕ್ಷಕರು ಸಹ ಹಾಡಿಗೆ ಧ್ವನಿಗೂಡಿಸಿದರು.’ ಮುಂಜಾನೆ ಮಂಜಲ್ಲಿ.., ನಿನ್ನ ಪೂಜೆಗೆ ಬಂದೆ ಮಹದೇಶ್ವರ.. ಹಾಡಿಗೆ ಪ್ರೇಕ್ಷಕ ಫಿದಾ ಆದ. ಅಬ್ಬರದ ಸಂಗೀತದ  ಪ್ರವಾಹಕ್ಕೆ ಯುವ ಸಮೂಹವು ಕುಣಿದು ಕುಪ್ಪಳಿಸಿ ಸಂಮೋಹಿತರಾದರು. ವೇದಿಕೆಗೆ ಆಮಿಸುತ್ತಿದ್ದಂತೆ ಮೈಸೂರು ನಮಸ್ಕಾರ… ಆರ್..ಯೂ ರೆಡಿ ಎಂದಾಕ್ಷಣ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ, ಕೇಕೆ ಮುಗಿಲು ಮುಟ್ಟಿತು. ಕಡು ನೀಲಿ ಬಣ್ಣದ ಪಂಚೆ, ಟಿ-ಶರ್ಟ್ ಹಾಗೂ ಕಾಲಿಗೆ ಗೆಜ್ಜೆ ದರಿಸಿ ಆಗಮಿಸಿದ ರಘು ಮೈಸೂರಿಗರನ್ನು ಸಂಗೀತದ ಮಾಂತ್ರಿಕ ಲೋಕಕ್ಕೆ ಸೆಳೆದೊಯ್ಯದರು. ಹಾಡಿದ ಪ್ರತಿ ಗೀತೆಗೂ ಒನ್ಸ್ ಮೋರ್..ಒನ್ಸ್ ಮೋರ್… ಮಾಮೂಲಿಯಾಗಿತ್ತು.

ಇದಕ್ಕೂ ಮುನ್ನ ಯುವ ಸಂಭ್ರಮದಲ್ಲಿ ಆಯ್ಕೆಯಾದ ಜೆ.ಎಸ್.ಎಸ್. ಮಹಿಳಾ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳ ‘ಓಂ ನಮಃ ಶಿವಾಯ’ ಶಿವನ ರುದ್ರಾವತಾರ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಹಾಸನದ ಭಾರತೀಯ ಸಂಗೀತ ನೃತ್ಯ ಶಾಲಾ ಕಲಾವಿದರು ‘ಶಾಕುಂತಲೆಯ ಕನಸು’ ನೃತ್ಯ ರೂಪಕ. ರಾಘವ ಡ್ಯಾನ್ಸ್ ಅಕಾಡೆಮಿಯ ಕಲಾವಿದರು ಕನ್ನಡ ಪ್ರೇಮ ಸಾರುವ ಗೀತೆ ಕನ್ನಡ ಅಭಿಮಾನ ಪ್ರದರ್ಶಿಸಿದರು.

 

Leave a Reply

comments

Related Articles

error: