ಸುದ್ದಿ ಸಂಕ್ಷಿಪ್ತ

ಸಂವಿಧಾನ ಉಳಿಸಿ ದೇಶಪ್ರೇಮಿ ಸಮಾವೇಶ: ಜೂನ್ 11 ರಂದು

ಮೈಸೂರು, ಮೇ 31: ಸಂವಿಧಾನ ಉಳಿಸಿ ದೇಶಪ್ರೇಮಿ ಸಮಾವೇಶವು ಜೂನ್ 4 ರ ಬದಲಿಗೆ ಜೂನ್ 11 ರಂದು ನಡೆಯಲಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ ತಿಳಿಸಿದೆ. ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ನಡೆಯಲಿರುವ ಈ ಸಮಾವೇಶವನ್ನು ಅಂದು ಮ.12 ಗಂಟೆಗೆ ಸಂಸತ್ ಸದಸ್ಯರು ಹಾಗೂ ಸಿ.ಪಿ.ಐ.(ಎಂ) ಪಕ್ಷದ ಪ್ರಧಾನ ಕಾರ್ಯದರ್ಶಿ ಕಾಂ.ಸೀತಾರಾಂ ಯೆಚೂರಿ ಅವರು ಉದ್ಘಾಟಿಸಲಿದ್ದಾರೆ. ಮೈಸೂರು,  ಮಂಡ್ಯ, ಹಾಸನ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ಸಿ.ಪಿ.ಐ.(ಎಂ) ಜಿಲ್ಲಾ ಘಟಕಗಳು ಸಮಾವೇಶವನ್ನು ಸಂಘಟಿಸಿರುತ್ತವೆ ಎಂದು ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜು ತಿಳಿಸಿದ್ದಾರೆ. (ಎಲ್.ಜಿ)

Leave a Reply

comments

Related Articles

error: