ಸುದ್ದಿ ಸಂಕ್ಷಿಪ್ತ

ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ: ಜೂನ್ 4 ರಂದು

ಮೈಸೂರು, ಮೇ 31: ನವಭಾರತ್ ನಿರ್ಮಾಣ್ ಸೇವಾ ಸಮಿತಿ ವತಿಯಿಂದ ಜೂನ್ 4 ರಂದು ಸಂಜೆ 5 ಗಂಟೆಗೆ ಹೆಬ್ಬಾಳು ಮುಖ್ಯ ರಸ್ತೆಯ ವಿಶ್ವಮಾನವ ಕುವೆಂಪು ವೃತ್ತದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಾಡೋಜ ಡಾ.ಸಾಲುಮರದ ತಿಮ್ಮಕ್ಕ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಿಂದ ಉದ್ಘಾಟನೆ ಹಾಗೂ ಸನ್ಮಾನವಿರುತ್ತದೆ. ಇದೇ ಸಂದರ್ಭದಲ್ಲಿ ಶಾಸಕ ವಾಸುರವರ ಅನುದಾನದಲ್ಲಿ ನಿರ್ಮಿಸಿರುವ ಹೆಬ್ಬಾಳು ಸಾರ್ವಜನಿಕ ಗ್ರಂಥಾಲಯದ ಉದ್ಘಾಟನೆಯನ್ನು ಪ್ರಾಥಮಿಕ ಮತ್ತು ಪ್ರೌಢ ಸಚಿವ ತನ್ವೀರ್ ಸೇಠ್ ನೆರವೇರಿಸಲಿದ್ದಾರೆ. ಚಲನಚಿತ್ರ ಗಾಯಕ ಗಾಯಕಿಯರಿಂದ ಮಧುರ ಮುಂಗಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೇಯರ್ ಎಂ.ಜೆ.ರವಿಕುಮಾರ್, ಮೈಸೂರು ನಗರ ಗ್ರಂಥಾಲಯದ ಅಧ್ಯಕ್ಷ ಕೆ.ಟಿ.ಚಲುವೇಗೌಡ ಮತ್ತಿತರರು ಆಗಮಿಸಲಿದ್ದಾರೆ. (ಎಲ್.ಜಿ)

Leave a Reply

comments

Related Articles

error: