ಮನರಂಜನೆ

‘ದನ ಕಾಯೋನು’ ಚಿತ್ರದ ಬಿಡುಗಡೆ ಮುಂದಕ್ಕೆ?

duniya-vijay-and-yograj-webಬೆಂಗಳೂರು: ಯೋಗರಾಜ್‍ ಭಟ್‍ ನಿರ್ದೇಶನದ ಬಹು ನಿರೀಕ್ಷಿತ “ದನ ಕಾಯೋನು” ಚಿತ್ರ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆಯಿದೆ ಎಂಬ ಸುದ್ದಿ ಕೇಳಿಬಂದಿದೆ. ಈ ಚಿತ್ರವೂ ಅ.7ರಂದು ಬಿಡುಗಡೆಯಾಗಬೇಕಿತ್ತು.

ಚಿತ್ರ ನಟ ದುನಿಯಾ ವಿಜಯ್ ಹಾಗೂ ನಿರ್ದೇಶಕರಾದ ಯೋಗರಾಜ್‍ ಭಟ್‍ ಯೂನಿಪಿ ಮೀಡಿಯಾದಿಂದ ಕಮಿಷನ್ ಪಡೆದಿದ್ದಾರೆ ಎಂದು ನಿರ್ಮಾಪಕ ಕನಕಪುರ ಶ್ರೀನಿವಾಸ್ ಆರೋಪಿಸಿದ್ದಾರೆ ಎಂಬ ವಿವಾದ ಸೃಷ್ಟಿಯಾಗಿದೆ. ಇದರಿಂದ ಆಕ್ರೋಶಗೊಂಡ ಯೋಗರಾಜ್ ಭಟ್ ಮತ್ತು ವಿಜಯ್ ನಮಗೆ ನೀಡಲು ಬಾಕಿಯಿರುವ ಹಣವನ್ನು ನೀಡಿ ಬಳಿಕ ಚಿತ್ರ ರಿಲೀಸ್ ಮಾಡಲಿ. ನಮ್ಮ ಮೇಲೆ ಈ ರೀತಿಯ ಆರೋಪಗಳು ಕೇಳಿಬಂದಿರುವುದು ಬಹಳ ಕೋಪ ತಂದಿದೆ. ನಿರ್ಮಾಪಕರು ಕ್ಷಮೆ ಯಾಚಿಸಲಿ ಎಂದು ಪ್ರತಿಕ್ರಿಯಿಸಿದ್ದಾರೆ ಎಂಬ ಮಾಹಿತಿಯೂ ಸಿಕ್ಕಿದೆ.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿರ್ಮಾಪಕ ಶ್ರೀನಿವಾಸ್, ಈ ಆರೋಪ ಸುಳ್ಳು. ನಿರ್ದೇಶಕರು ಮತ್ತು ನಮ್ಮ ನಡುವೆ ಯಾವುದೇ ಸಮಸ್ಯೆಯಿಲ್ಲ. ‘ದನ ಕಾಯೋನು’ ಚಿತ್ರ ಅ.7ರಂದೇ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನಿನ್ನೆಯಷ್ಟೇ ಭಟ್‍ರೊಂದಿಗೆ ಮಾತುಕತೆ ನಡೆಸಿದ್ದೇನೆ. ಚಿತ್ರತಂಡದಲ್ಲಿ ಒಡಕು ಮೂಡಿಸಲು ಯಾರೋ ಈ ರೀತಿ ವದಂತಿ ಹಬ್ಬಿಸಿದ್ದಾರೆ ಎಂದು ತಿಳಿಸಿದ್ದಾರೆ.

 

Leave a Reply

comments

Related Articles

error: