ಕರ್ನಾಟಕಮೈಸೂರು

ಮಡಿಕೇರಿ ನಗರದಲ್ಲಿ 40 ಜಾಂಡೀಸ್ ಪ್ರಕರಣ ಪತ್ತೆ

ಮಡಿಕೇರಿ, ಮೇ 31 : ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ 40 ಜಾಂಡೀಸ್ ಪ್ರಕರಣಗಳು ಪತ್ತೆಯಾಗಿರುವುದಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿ ಸಭೆಗೆ ಮಾಹಿತಿ ನೀಡಿದರು.

ಪತ್ತೆಯಾಗಿರುವ ಜಾಂಡೀಸ್ ಪ್ರಕರಣಗಳಲ್ಲಿ 20 ಪ್ರಕರಣಗಳು ಹೊರ ಜಿಲ್ಲೆಯಿಂದ ಇಲ್ಲಿಗೆ ಬಂದವರಲ್ಲಿ ಕಾಣಿಸಿಕೊಂಡಿದೆಯೆಂದು ತಿಳಿಸಿದ ಅವರು, ಸಾಕಷ್ಟು ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಜಾಂಡೀಸ್ ಬಗ್ಗೆ ಚಿಕಿತ್ಸೆ ಪಡೆಯುವುದರಿಂದ ಆ ಬಗ್ಗೆ ಸ್ಪಷ್ಟ ಮಾಹಿತಿಗಳು ದೊರಕುತ್ತಿಲ್ಲವೆಂದು ಹೇಳಿದರು. ಜಾಂಡೀಸ್ ಪತ್ತೆಯ ಹಿನ್ನೆಲೆಯಲ್ಲಿ ಈಗಾಗಲೆ ನೀರಿನ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆಯೆಂದು ತಿಳಿಸಿದರು.

-ಕೆ.ಸಿ.ಐ/ಎನ್.ಬಿ.ಎನ್.

Leave a Reply

comments

Related Articles

error: