ಪ್ರಮುಖ ಸುದ್ದಿಮೈಸೂರು

ಮಾವುತರ ಕುಟುಂಬಕ್ಕೆ ಉಪಹಾರ ವಿತರಣೆ

ಮೈಸೂರು ಅರಮನೆ ಆವರಣದಲ್ಲಿ ಕಾರ್ಪೋರೇಶನ್ ಬ್ಯಾಂಕ್ ಸಹಯೋಗದೊಂದಿಗೆ ಬುಧವಾರ ಬೆಳಿಗ್ಗೆ ಜಂಬೂಸವಾರಿ ಆನೆಗಳ ಮಾವುತರು ಮತ್ತು ಕಾವಾಡಿಗರ ಕುಟುಂಬಿಕರಿಗೆ ಉಪಹಾರ ಮತ್ತು ಟೀಶರ್ಟ್ ವಿತರಿಸುವ ಕಾರ್ಯಕ್ರಮ ಜರುಗಿತು.

ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಾವುತರು, ಕಾವಾಡಿಗರಿಗೆ ಟೀಶರ್ಟ್ ವಿತರಿಸಿದರು. ಬಳಿಕ ತಾನೇ ಸ್ವತ: ನಿಂತು ಅವರ ಕುಟುಂಬಿಕರೆಲ್ಲರಿಗೂ ಉಪಹಾರ ವಿತರಿಸಿದರು.

ನಂತರ ಮಾತನಾಡಿದ ಅವರು ಕಾರ್ಪೊರೇಶನ್ ಬ್ಯಾಂಕ್ ಪ್ರತಿವರ್ಷವೂ ಗೌರವಯುತವಾಗಿ ಇಂತಹ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರಲ್ಲದೆ ಮುಂದೆಯೂ ಮಹತ್ತರ ಕಾರ್ಯಗಳನ್ನು ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭ ಪ್ರಧಾನ ಕಾರ್ಪೊರೇಶನ್ ಆಡಳಿತ ನಿರ್ದೇಶಕ ಗುರುಪ್ರಸಾದ್ ಮತ್ತು ಜಿಲ್ಲೆಯ ವಿವಿಧ ಶಾಖೆಗಳ ಮ್ಯಾನೇಜರ್ ಗಳು ಉಪಸ್ಥಿತರಿದ್ದರು.

Leave a Reply

comments

Related Articles

error: