ಮನರಂಜನೆಮೈಸೂರು

‘ಮೈಥಿಲಿ’ ಆಡಿಯೋ ಸಿ.ಡಿ. ಬಿಡುಗಡೆ

maitiliಕಲಾತ್ಮಕ ಚಿತ್ರ ‘ಮೈಥಿಲಿ’ಯ ಆಡಿಯೋ ಸಿ.ಡಿ.ಯನ್ನು ಅ. 9ರ ಭಾನುವಾರದ ಸಂಜೆ 6ಕ್ಕೆ ನಾದಬ್ರಹ್ಮ ಸಂಗೀತಾ ಸಭಾದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಚಿತ್ರದ ನಿರ್ದೇಶಕ ಅಶೋಕ್ ಕೆ.ಕಡಲು ತಿಳಿಸಿದರು.

ಅವರು ನಗರದ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಂದೋಲನ ಪತ್ರಿಕೆಯ ಸಂಪಾದಕರಾದ ರಾಜಶೇಖರ ಕೋಟಿ ಕಾರ್ಯಕ್ರಮ ಉದ್ಘಾಟಿಸುವರು. ಅಂತಾರಾಷ್ಟ್ರೀಯ ಕ್ರಿಕೆಟ್ ಪಟು ದೊಡ್ಡ ಗಣೇಶ್ ಅವರು ಆಡಿಯೋ ಸಿ.ಡಿ. ಬಿಡುಗಡೆ ಗೊಳಿಸುವರು. ಮುಖ್ಯ ಅತಿಥಿಗಳಾಗಿ ಹಿರಿಯ ನಟ ಶೃಂಗೇರಿ ರಾಮಣ್ಣ, ಹಿಂದಿ ಚಿತ್ರನಟ ಮನೋಜ್ ಮಲ್ಹೋತ್ರ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ದೀಪಕ್, ವಿಜಯ್ ಕುಮಾರ್, ಹರಿಕೃಷ್ಣ ಉಪಸ್ಥಿತರಿರುವರು. ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ ಎಂದು ತಿಳಿಸಿದರು.

ಮೈಥಿಲಿ ಕಲಾತ್ಮಕ ಚಿತ್ರವಾಗಿದ್ದು, ಇತ್ತೀಚಿನ ದಿನಗಳಲ್ಲಿ ಕಲಾತ್ಮಕ ಚಿತ್ರಗಳನ್ನು ಪ್ರೇಕ್ಷಕರು ಒಪ್ಪಿಕೊಳ್ಳುತ್ತಿದ್ದಾರೆ. ಪೋಷಕರ ಮಾತಿಗೆ ಬೆಲೆ ಕೊಡದೆ ದುಡುಕುವ ಹೆಣ್ಣೊಬ್ಬಳ ಕಥಾ ಹಂದರವಿರುವ ಮೈಥಿಲಿಯನ್ನು ಮಲೆನಾಡಿನ ಶೃಂಗೇರಿ ಮತ್ತು ಹೊರನಾಡಿನ ಪ್ರಕೃತಿಯ ಮಡಿಲಿನಲ್ಲಿ ಚಿತ್ರೀಕರಿಸಲಾಗಿದೆ. ಸಾಮಾಜಿಕ ಸಂದೇಶವಿರುವ ಚಿತ್ರವಾಗಿದ್ದು ಪ್ರತಿಯೊಬ್ಬ ಹೆಣ್ಣು ಮಕ್ಕಳು ನೋಡಲೇ ಬೇಕು. ತುಳು ಕಲಾವಿದರು ಚಿತ್ರದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಈಗಾಗಲೇ ಸಿನಿಮಾವು ಮುಕ್ತಾಯ ಹಂತದಲ್ಲಿದ್ದು ಡಿಸೆಂಬರ್ ಎರಡನೇ ವಾರದಲ್ಲಿ ತೆರೆ ಕಾಣಲಿದೆ ಎಂದರು.

ಚಿತ್ರದ ನಾಯಕಿ ದೀಪ್ತಿ ಮೋಹನ್ ಮಾತನಾಡಿ, ನನ್ನ ಮೊದಲ ಚಿತ್ರ ಮೈಥಿಲಿಯೂ ನಾಯಕಿ ಪ್ರಧಾನ ಪಾತ್ರವಾಗಿದ್ದು ಸಂತೋಷ ತಂದಿದೆ. ಹಾಡುಗಳು ಮಧುರವಾಗಿವೆ. ಚಿತ್ರ ತಂಡವೂ ಉತ್ತಮ ಕೆಲಸ ಮಾಡಿದ್ದು ರಾಜ್ಯದ ಜನತೆ ಶುಭ ಹಾರೈಸಲಿ ಎಂದು ಆಶಿಸಿದರು. ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕಿ ಲತಾ ಶ್ರೀನಿವಾಸ, ರಂಜಿತ್ ಉಪಸ್ಥಿತರಿದ್ದರು.

Leave a Reply

comments

Related Articles

error: