ಸುದ್ದಿ ಸಂಕ್ಷಿಪ್ತ

ತಂತ್ರಜ್ಞಾನ ಹೇಳೋ ಕಥೆ: ಟೆಕ್ ದಸರಾ

ತಂತ್ರಜ್ಞಾನದ ಯುಗದಲ್ಲಿ ಎಲ್ಲವೂ ತಂತ್ರಗಾರಿಕೆಯೇ ಇದಕ್ಕೆ ಮೈಸೂರಿನ ದಸರಾ ಹೊರತಾಗಿಲ್ಲ. ಮೈಸೂರಿನ ವಿಸ್ಟೋ ಎಜುಕೇಶ್ ಸೊಲ್ಯೂಷನ್  ‘ಟೆಕ್ ದಸರಾ’ ವಿನೂತನ ತಂತ್ರಜ್ಞಾನದ ಮೂಲಕ ದಸರಾ ಬಿಂಭಿಸಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಸುಮಂತ್ ಪ್ರಭು ತಿಳಿಸಿದರು.

ಅವರು ನಗರದ ಪತ್ರಕರ್ತರ ಭವನದಲ್ಲಿ ಇಂದು (ಅ.5) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅ.6 ರಿಂದ 12ರವರೆಗೆ ಮಾಲ್ ಆಫ್ ಮೈಸೂರಿನ 4ನೇ ಅಂತಸ್ತಿನಲ್ಲಿ ತಂತ್ರಜ್ಞಾನದ ಮೂಲಕ ಕಥೆ ಹೇಳುವ ವಿನೂತನ ಕಾರ್ಯಕ್ರಮ ಟೆಕ್ ದಸರಾವನ್ನು ಆಯೋಜಿಸಿದ್ದು ಚಲಿಸುವ ಮಾಡೆಲ್ ಗಳ ಮೂಲಕ ಮೈಸೂರಿನ ಉಗಮ, ಹಳೇ ಮೈಸೂರಿನ ವೈಭವ, ನವರಾತ್ರಿ ಸಂಭ್ರಮ, ನಾಡಿಗೆ ರಾಜರ ಕೊಡುಗೆ, ತಾಯಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸುವ ಕಥೆ, ಅಲ್ಲದೆ ಮಕ್ಕಳ ಅಚ್ಚುಮೆಚ್ಚಿನ ಸ್ಕೇರಿ ಹೌಸ್, ಜಾಯಿಂಟ್ ವೀಲ್, ಕೊಲಂಬಸ್  ಹೀಗೆ 60 ಕ್ಕೂ ಅಧಿಕ ಯಾಂತ್ರಿಕ ಮಾಡೆಲ್ ಗಳನ್ನು ಪ್ರದರ್ಶಿಲಾಗುವುದು. ಇದು ವಿದ್ಯಾರ್ಥಿಗಳಿಗೆ ಇತಿಹಾಸವನ್ನು ತಲುಪಿಸುವ ಸಣ್ಣ ಪ್ರಯತ್ನವಾಗಿದೆ ಎಂದು ತಿಳಿಸಿದರು.

Leave a Reply

comments

Related Articles

error: