ಮೈಸೂರು

ನಾಲ್ವಡಿ ಕೃಷ್ಣರಾಜ ಒಡೆಯರ್ 133ನೇ ಜಯಂತಿ: ಜೂ.4 ರಂದು

ಮೈಸೂರು, ಜೂ. 1 : ತ್ಯಾಗರಾಜ ರಸ್ತೆಯಲ್ಲಿರುವ ಅರಸು ಮಂಡಲಿ ಸಂಘದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 133ನೇ ಜಯಂತಿ ಹಾಗೂ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಎಂ.ಲಿಂಗರಾಜೇ ಅರಸ್ ತಿಳಿಸಿದರು.

ಗುರುವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರಸ್ ಅವರು, ಜೂ.4ರಂದು ಬೆಳಿಗ್ಗೆ 11ಕ್ಕೆ ಜಗನ್ಮೋಹನ ಅರಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರಾಜವಂಶಸ್ಥರಾದ ಡಾ.ಪ್ರಮೋದಾ ದೇವಿ ಒಡೆಯರ್, ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್  ಹಾಗೂ ತ್ರಿಶಿಕಾದೇವಿ ಒಡೆಯರ್ ಇವರುಗಳು ಚಾಲನೆ ನೀಡುವರು, ಇದೇ ಸಂದರ್ಭದಲ್ಲಿ ಯದುವೀರ ಒಡೆಯರ್ ದಂಪತಿಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಒಡೆಯರ್ ಭಾವಚಿತ್ರ ಮೆರವಣಿಗೆಯು ಬೆಳಿಗ್ಗೆ 9 ಕ್ಕೆ ಸಂಘದ ಆವರಣದಿಂದ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಹೊರಟು ನಗರದ ಅಗ್ರಹಾರ, ನ್ಯೂ ಸಯ್ಯಾಜಿರಾವ್ ರಸ್ತೆ, ಕಾರ್ಪೋರೇಷನ್ ಮುಂಭಾಗದಿಂದ ಸಾಗಿ ಕೆ.ಆರ್.ರಸ್ತೆಯಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಲಾಗುವುದು ಎಂದು ತಿಳಿಸಿದರು.

ಉಪಾಧ್ಯಕ್ಷ ಬಿ.ಸಿ.ರಾಮಚಂದ್ರ ರಾಜೇ ಅರಸ್, ಕಾರ್ಯದರ್ಶಿ ಚಂದ್ರಕಾಂತ ರಾಜೇ ಅರಸ್, ಎಂ.ವಿ.ಮಲ್ಲರಾಜೇ ಅರಸ್, ಸಾಂಸ್ಕೃತಿಕ ಉಪಸಮಿತಿ ಅಧ್ಯಕ್ಷೆ ಇಂದ್ರಾಣಿ ಹಾಗೂ ಮಾಜಿ ಅಧ್ಯಕ್ಷೆ ಡಾ.ರತ್ನ ಅರಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್, ಎಲ್.ಜಿ)

Leave a Reply

comments

Related Articles

error: