ಕರ್ನಾಟಕಪ್ರಮುಖ ಸುದ್ದಿ

ಗ್ರಂಥಾಲಯ ವಿಜ್ಞಾನ, ಮಾಹಿತಿ ನಿರ್ವಹಣೆ ಪ್ರವೇಶಕ್ಕಾಗಿ ಅರ್ಜಿ ; ಜೂನ್ 5 ಕೊನೆ ದಿನ

ಬೆಂಗಳೂರು, ಜೂನ್ 1 : ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ 2017-18 ನೇ ಸಾಲಿನ ಡಿಪ್ಲೊಮಾ ಪ್ರವೇಶಕ್ಕೆ ಸಂಬಂಧಿಸಿದಂತೆ ಗ್ರಂಥಾಲಯ ವಿಜ್ಞಾನ ಮತ್ತು ಮಾಹಿತಿ ನಿರ್ವಹಣೆಗೆ ವಿಭಾಗದ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಜೂನ್ 5 ಕೊನೆಯ ದಿನವಾಗಿದ್ದು (ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶದವರೆಗೂ ಅವಧಿ ವಿಸ್ತರಣೆ ಆಗುವ ಸಂಭವವಿದೆ)  ಪ್ರವೇಶಕ್ಕೆ ಬೇಕಾದ ಅರ್ಹತೆ ದ್ವಿತೀಯ ಪಿಯುಸಿ (ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗ) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಹೆಣ್ಣು ಮಕ್ಕಳಿಗಾಗಿಯೇ ಮೀಸಲಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಬೆಂಗಳೂರು, ಈ ಸಂಸ್ಥೆಯಲ್ಲಿ ಎರಡು ವರ್ಷ ಅವಧಿಯ ಅತಿ ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ವ್ಯಾಸಂಗಕ್ಕಾಗಿ ಅವಕಾಶಗಳಿವೆ.  ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಅಗತ್ಯವಿದ್ದಲ್ಲಿ ಸಂಸ್ಥೆಯ ಆವರಣದಲ್ಲೇ ವಸತಿನಿಲಯದ ಸೌಲಭ್ಯವಿದೆ.  ಅಲ್ಲದೇ ಹಲವಾರು ಉಚಿತ ವಸತಿ ನಿಲಯಗಳು ಬೆಂಗಳೂರು ನಗರದಲ್ಲಿವೆ. ಉದ್ಯೋಗಾವಕಾಶವು ವಿಫುಲವಾಗಿದೆ ಎಂದು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‍ನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂ. 99644 20060, 94814 26691, 97399 21754, 080-2228 2515.

-ಎನ್.ಬಿ.ಎನ್.

Leave a Reply

comments

Related Articles

error: