ಕರ್ನಾಟಕಪ್ರಮುಖ ಸುದ್ದಿ

ಕರ ವಸೂಲಿದಾರ, ಅಕೌಂಟೆಂಟ್ ಹುದ್ದೆ : ಕೆಪಿಎಸ್‍ಸಿ ಕಟ್‍ಆಫ್ ಅಂಕ ಪ್ರಕಟ

ಬೆಂಗಳೂರು, ಜೂನ್ 1 : ಕರ್ನಾಟಕ ಲೋಕಸೇವಾ ಆಯೋಗವು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಿಲಯ ಮೇಲ್ವಿಚಾರಕರು ಮತ್ತು ಪೌರಾಡಳಿತ ಇಲಾಖೆಯಲ್ಲಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಕರವಸೂಲಿಗಾರರ 43 ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು ಮೇ 26 ರಂದು ಪ್ರಕಟಿಸಿದೆ. ಹಾಗೂ ಪೌರಾಡಳಿತ ಇಲಾಖೆಯಲ್ಲಿನ ಮಹಾನಗರ ಪಾಲಿಕೆಯಲ್ಲಿನ ಅಕೌಂಟೆಂಟ್ ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಮತ್ತು ಕಟ್-ಆಫ್ ಅಂಕಗಳನ್ನು ಮೇ 27 ರಂದು ಆಯೋಗದ ವೆಬ್‍ಸೈಟ್ ನಲ್ಲಿ www.kpsc.kar.nic.in ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಿದೆ.

ಪೌರಾಡಳಿತ ಇಲಾಖೆಯಲ್ಲಿನ ಮಹಾನಗರ ಪಾಲಿಕೆಯಲ್ಲಿನ ಅಕೌಂಟೆಂಟ್ ಹುದ್ದೆಗಳ ತಾತ್ಕಾಲಿನ ಆಯ್ಕೆಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಇಚ್ಫಿಸುವ ಅಭ್ಯರ್ಥಿಗಳು ಆಯ್ಕೆಪಟ್ಟಿ ಪ್ರಕಟಿಸಿದ ದಿನಾಂಕದಿಂದ ಏಳು ದಿನಗಳೊಳಗಾಗಿ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು – 560 001, ಇವರಿಗೆ ಸಲ್ಲಿಸಬಹುದು. ನಿಗದಿತ ದಿನಾಂಕದ ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

-ಎನ್.ಬಿ.ಎನ್.

Leave a Reply

comments

Related Articles

error: