ಸುದ್ದಿ ಸಂಕ್ಷಿಪ್ತ

ಸಮಾವೇಶ : ಸಾಂಸ್ಕೃತಿಕ ಕಾರ್ಯಕ್ರಮ

ಮೈಸೂರು.ಜೂ.1 : ಮೈಸೂರು ವಿಭಾಗ ಮಟ್ಟದ ಮಾಹಿತಿ ಉತ್ಸವ ಕೊಟ್ಟ ಮಾತು – ದಿಟ್ಟ ಸಾಧನೆ ಸೌಲಭ್ಯ ವಿತರಣಾ ಸಮಾವೇಶವೂ ಜೂ.2ರಿಂದ 4ರವರೆಗೆ ಮೂರುದಿನಗಳ ಕಾಲ ಮಾಹಿತಿ ಹಾಗೂ ಮನರಂಜನಾ ಕಾರ್ಯಕ್ರಮವನ್ನು ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ಜೂ.2ರಂದು ಸಂಜೆ 4.30ಕ್ಕೆ ವಸ್ತು ಪ್ರದರ್ಶನ ಮಳಿಗೆ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ನೆರವೇರಿಸುವರು.

ಜೂ.3ರ ಶನಿವಾರ ಸಂಜೆ 6ಕ್ಕೆ ಸುನಿತಾ ಚಂದ್ರಕುಮಾರ್, ರಘುಲೀಲಾ ಸಂಗೀತ ಶಾಲೆ  ಇವರಿಂದ ಸಾಂಸ್ಕೃತಿಕ ಹಾಗೂ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರಿಂದ ಮನರಂಜನಾ ಕಾರ್ಯಕ್ರಮವನ್ನು ಇರುವುದು.

ಜೂ.4ರಂದು ಸಂಜೆ 6ಕ್ಕೆ ಸ್ವಾಹ ತಂಡದವರಿಂದ ವರ್ಲ್ಡ್ ಪರ್ಕ್ಯೂಷನ್ ಬ್ಯಾಂಡ್ ವಾದನ ನಂತರ ನವೀನ್ ಸಜ್ಜು ಅವರಿಂದ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Leave a Reply

comments

Related Articles

error: