ಸುದ್ದಿ ಸಂಕ್ಷಿಪ್ತ

ಅಂಧ ಹಾಗೂ ವಿಕಲಾಂಗ ಚೇತನರಿಗೆ ಉಚಿತ ಕಂಪ್ಯೂಟರ್ ತರಬೇತಿ : ಅರ್ಜಿ ಆಹ್ವಾನ

ಮೈಸೂರು.ಜೂ.1 : ಕರ್ನಾಟಕ ಅಂಧರ ಕ್ಷೇಮಾಭ್ಯುದಯ ಸಂಸ್ಥೆಯಿಂದ ಅಂಧ ಮತ್ತು ದೈಹಿಕ ವಿಕಲಚೇತನರಿಗೆ ಕಂಪ್ಯೂಟರ್ ತರಬೇತಿಯನ್ನು ನಾಲ್ಕು ತಿಂಗಳ ಅವಧಿಗೆ ಹಮ್ಮಿಕೊಂಡಿದೆ.

ಪ್ರಥಮ ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರುವ 40 ವರ್ಷದೊಳಗಿರುವ ಅಂಧ ಮತ್ತು ದೈಹಿಕ ವಿಕಲಚೇತನರ ಅಭ್ಯರ್ಥಿಗಳು ಬೇಸಿಕ್ ಕಂಪ್ಯೂಟರ್, ಸ್ಪೋಕನ್ ಇಂಗ್ಲೀಷ್, ಬ್ರೈಲ್ ಲಿಪಿ ಮತ್ತು ಚಲನವನ ತರಬೇತಿ ನೀಡಲಾಗುವುದು. ಅರ್ಹ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ಅಂಗವಿಕಲತೆಯ ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಆಧಾರ ಕಾರ್ಡ್ ನೊಂದಿಗೆ ಕರ್ನಾಟಕ ಅಂಧರ ಕ್ಷೇಮಾಭ್ಯುದಯ ಸಂಸ್ಥೆ, ನ.69, ಎಸ್.ಸಿ, ರಸ್ತೆ, ನೆಹರುನಗರ, ಶೇಷಾಧ್ರಿಪುರಂ, ಬೆಂಗಳೂರು ಇಲ್ಲಿಗೆ ತಲುಪಿಸಬೇಕು. ಹೆಚ್ಚಿನ ವಿವರಗಳಿಗಾಗಿ ದೂ.ಸಂ 8088611200, 9741122706 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: