ಮೈಸೂರು

ಸೆಪ್ಟಂಬರ್ 2ರ ದೇಶ ವ್ಯಾಪಿ ಮುಷ್ಕರಕ್ಕೆ ವಿವಿಧ ಒಕ್ಕೂಟಗಳ ಬೆಂಬಲ

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಸೆಪ್ಟೆಂಬರ್ 2 ರಂದು ನಡೆಯುತ್ತಿರುವ ದೇಶವ್ಯಾಪ್ತಿ ಮುಷ್ಕರಕ್ಕೆ ಬೊರೂಕ ಎಕ್ಸಟ್ರುಷಿನ್ ಕಾರ್ಮಿಕ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ.

ಬಿಜೆಪಿ ಕಳೆದ ಲೋಕಸಭಾ ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಇದನ್ನು ಮರೆಮಾಚಲು ಕಾರ್ಮಿಕ ಕಾನೂನುಗಳ ಸುಧಾರಣೆ ಹೆಸರಿನಲ್ಲಿ ತಿದ್ದುಪಡಿ ತಂದು ಕಾರ್ಮಿಕ ಒಕ್ಕೂಟಗಳ ಬಲ ಕುಂದಿಸಲು ಪ್ರಯತ್ನಿಸುತ್ತಿದೆ. ಇಂತಹ ಕ್ರಮಗಳಿಂದ ಹಿಂದೆ ಸರಿಯುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಮುಷ್ಕರಕ್ಕೆ ಬೆಂಬಲ ನೀಡಿರುವುದಾಗಿ ಸಂಘಟನೆ ಹೇಳಿಕೊಂಡಿದೆ.

ಬಿ.ಎಸ್.ಎನ್.ಎಲ್. ನೌಕರರ ಒಕ್ಕೂಟ ಬೆಂಬಲ

ಕೇಂದ್ರ/ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿ ಬಿಸಿ ತುಪ್ಪವಾಗಿದ್ದು  ಹೊಸ ತಿದ್ದು ಪಡಿಯ ಕಾನೂನು ಬಂಡವಾಳ ಶಾಹಿ ಮತ್ತು ಉದ್ಯಮಿಗಳ ಪಾಲಿಗೆ ಪರವಾಗಿವೆ. ಕಾರಣ ನೀಡದೆ ಏಕಾಏಕಿ ವಜಾ ಮಾಡುವುದು, ಇ.ಪಿ.ಎಫ್. ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸುವುದನ್ನು ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ವಿರೋಧಿಸಿ ಬಿ.ಎಸ್.ಎನ್.ಎಲ್. ನೌಕರರ ಒಕ್ಕೂಟವು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದೆ.

‘ಬಿ.ಎಸ್.ಎನ್. ಎಲ್  ಉಳಿಸಿ – ದೇಶ ಉಳಿಸಿ’ ಧ್ಯೇಯ ವಾಕ್ಯದೊಂದಿಗೆ ನೌಕರರಿಗೆ ಕನಿಷ್ಠ ವೇತನ ನೀಡಬೇಕೆಂದು ಸಂಘಟನೆ ಆಗ್ರಹಿಸಿದೆ.

 

Leave a Reply

comments

Related Articles

error: