ಮೈಸೂರು

ಚಾಮುಂಡಿಬೆಟ್ಟ ಖಾಸಗಿ ವಾಹನ ಪ್ರವೇಶಕ್ಕೆ ಮುಕ್ತ

ಮೈಸೂರು ದಸರಾ ಉತ್ಸವ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ಅಪಾರ ಭಕ್ತರು, ಪ್ರವಾಸಿಗರು ಪಾಲ್ಗೊಳ್ಳುವ ನಿಟ್ಟಿನಲ್ಲಿ  ಅಕ್ಟೋಬರ್ 1ರಿಂದ 16ರವರೆಗೆ ಪ್ರತಿದಿನ ಬೆಳಿಗ್ಗೆ 6ಗಂಟೆಯಿಂದ ರಾತ್ರಿ 8.30ರವರೆಗೆ ಖಾಸಗಿ ವಾಹನಗಳನ್ನು ಚಾಮುಂಡಿ ಬೆಟ್ಟದ ತಾವರೆಕಟ್ಟೆ ಬಳಿಯಿಂದ ಚಾಮುಂಡಿಬೆಟ್ಟಕ್ಕೆ ಸಂಚರಿಸುವುದನ್ನು ಜಿಲ್ಲಾಡಳಿತ ನಿರ್ಬಂಧಿಸಿತ್ತು. ಆದರೆ ಇದೀಗ ಜಿಲ್ಲಾಡಳಿತ ನಿರ್ಬಂಧವನ್ನು ತೆರವುಗೊಳಿಸಿದ್ದು ಖಾಸಗಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿದೆ.

ಚಾಮುಂಡಿ ಬೆಟ್ಟಕ್ಕೆ ಇದೀಗ ನಿರೀಕ್ಷೆಯಷ್ಟು ಜನರು ಆಗಮಿಸುತ್ತಿಲ್ಲ. ಜಿಲ್ಲಾಡಳಿತವೇನೋ ಒಳ್ಳೆಯ ನಿರ್ಧಾರವನ್ನೇ ಕೈಗೊಂಡಿತ್ತು. ಲಲಿತಮಹಲ್ ಹೆಲಿಪ್ಯಾಡ್ ನಲ್ಲಿ ಸಾರ್ವಜನಿಕರು ತಮ್ಮ ವಾಹನವನ್ನು ನಿಲ್ಲಿಸಿ ಅಲ್ಲಿಂದ ಉಚಿತವಾಗಿ ಬೆಟ್ಟಕ್ಕೆ ಕರೆದೊಯ್ಯುವ ಸರ್ಕಾರಿ ಬಸ್ ನಲ್ಲಿ ತೆರಳಬೇಕಾಗಿತ್ತು. ಕೆಲವು ಪ್ರಯಾಣಿಕರು ಲಲಿತ್ ಮಹಲ್ ನಲ್ಲಿ ನಿಲ್ಲಿಸಲಾಗಿರುವ ತಮ್ಮ ವಾಹನಗಳಿಗೆ ಭದ್ರತೆ ಏನು ಎಂದು ಪ್ರಶ್ನಿಸಿದ್ದರು. ಇದರಿಂದ ಕೆಲವು ಪ್ರವಾಸಿಗರು, ಭಕ್ತರು ಬರುವುದನ್ನೇ ನಿಲ್ಲಿಸಿರಬೇಕೆಂಬ ಹಿನ್ನೆಲೆಯಲ್ಲಿ ಖಾಸಗಿ ವಾಹನ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ.

Leave a Reply

comments

Related Articles

error: