ಮೈಸೂರು

ವರದಕ್ಷಿಣೆ ಕಿರುಕುಳ ಪತಿ ವಿರುದ್ಧ ಪತ್ನಿ ಆರೋಪ

ಮೈಸೂರು,ಜೂ.1:- ವರದಕ್ಷಿಣೆ ಕಿರುಕುಳ ಆರೋಪ ಪತಿ ವಿರುದ್ದ ಪತ್ನಿ ದೂರು ದಾಖಲಿಸಿದ ಘಟನೆ ನಡೆದಿದೆ.
ಪತಿ ಪ್ರಥಮ್ ಸೂರ್ಯ ವಿರುದ್ದ ಪತ್ನಿ ಗೌರಿ ದೂರು ಸಲ್ಲಿಸಿದ್ದಾಳೆ. ಸೋಮವಾರಪೇಟೆ ಮೂಲದ ಗೌರಿ, ಮತ್ತು ಮೈಸೂರಿನ ಪ್ರಥಮ್ 2015 ರ ಸೆ.23 ರಂದು ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ, ಪತಿಗೆ 25ಲಕ್ಷರೂ, ವಾಚ್, ಉಂಗುರ ಸೇರಿದಂತೆ ಚಿನ್ನದ ಚೈನ್ ಕೂಡ ನೀಡಲಾಗಿತ್ತು. ಆದರೆ ಇದು ಸಾಲಲ್ಲ ಮತ್ತಷ್ಟು ಹಣ ನೀಡುವಂತೆ ಪ್ರಥಮ್ ಕಳೆದ ಮೂರು ತಿಂಗಳಗಳಿಂದ ಗೌರಿಗೆ ನಿರಂತರವಾಗಿ ಟಾರ್ಚರ್ ನೀಡುತ್ತಿದ್ದಾನೆ ಎನ್ನಲಾಗಿದೆ. ಪ್ರಥಮ್ ಜೊತೆ ಅವರ ಕುಟುಂಬಸ್ಥರಾದ ಸುರೇಶ್ ಮತ್ತು ವಿಜಯಲಕ್ಷ್ಮಿ ಕೂಡ ಕಿರುಕುಳ ನೀಡುತ್ತಿದ್ದಾರೆಂದು ಗೌರಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾಳೆ. ಇವರಿಬ್ಬರ ಮದುವೆ ಲಲಿತ್ ಮಹಲ್ ಹೋಟೆಲ್ ನಲ್ಲಿ ನಡೆದಿತ್ತು. ಹೀಗಾಗಿ ನ್ಯಾಯ ಕೊಡಿಸುವಂತೆ  ಮಹಿಳಾ ಪೋಲಿಸ್ ಠಾಣೆಗೆ ಗೌರಿ ದೂರನ್ನು ಸಲ್ಲಿಸಿದ್ದಾಳೆ. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: