ಮೈಸೂರು

ಪರಿಸರ ಕಾಳಜಿ ಕುರಿತು ಚಿತ್ರದ ಮೂಲಕವೇ ಅಭಿವ್ಯಕ್ತಪಡಿಸಿದ ವಿದ್ಯಾರ್ಥಿಗಳು

ಮೈಸೂರು, ಜೂ.1:- ಮೈಸೂರಿನ ಕುಕ್ಕರಹಳ್ಳಿ ಕೆರೆಯ ಆವರಣದಲ್ಲಿ ಮೈಸೂರು  ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜನಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ‘ಜನರನ್ನು ಪ್ರಕೃತಿಯೊಂದಿಗೆ ಸಂಪರ್ಕಿಸೋಣ’ ಎಂಬ ಶೀರ್ಷಿಕೆಯಡಿ  ಗುರುವಾರ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

1ನೇ ತರಗತಿಯಿಂದ 5, 6ನೇ ತರಗತಿಯಿಂದ 8, ಮತ್ತು  9ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಎಂದು  ಮೂರು ವಿಭಾಗಗಳಲ್ಲಿ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆ ನಡೆಸಲಾಗಿತ್ತು. ಸುಮಾರು 300ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು..

ಪ್ರತಿಯೊಂದು ವಿದ್ಯಾರ್ಥಿಗಳು ಪರಿಸರ ಕುರಿತಾದ ಕಾಳಜಿಯನ್ನು ಸಾರುವ, ಪರಿಸರವಿಲ್ಲದಿದ್ದರೆ ಮುಂದಾಗುವ ಅನಾಹುತಗಳ ಕುರಿತು ಚಿತ್ರಗಳಲ್ಲಿ ಅಭಿವ್ಯಕ್ತಪಡಿಸಿದ್ದರು.

ಈ ಸಂದರ್ಭ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರಾಧಿಕಾರಿ ಎಂ.ಜಿ.ಯತೀಶ್ ಮಾತನಾಡಿ, ಮಕ್ಕಳಲ್ಲಿ ಪರಿಸರ ಕುರಿತು ಕಾಳಜಿಯನ್ನು ಬೆಳೆಸಲು ಈ ಕಾರ್ಯಕ್ರಮವನ್ನು ಕಳೆದ 25ವರ್ಷಗಳಿಂದ ಆಯೋಜಿಸಿಕೊಂಡು ಬರುತ್ತಿದ್ದೇವೆ. ಜೂ.5ರಂದು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು ಎಂದರು.

ಸಹಾಯಕ ಪರಿಸರಾಧಿಕಾರಿ ಸಬಿಕೆ ನೋಬಿಯಾ, ಪರಿಸರಾಧಿಕಾರಿ ಎಂ.ಜಿ.ರಘುರಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ವರದಿ:ಬಿ.ಎಂ,ಎಸ್.ಎಚ್)

 

Leave a Reply

comments

Related Articles

error: