ಸುದ್ದಿ ಸಂಕ್ಷಿಪ್ತ

ಜೂ.02 ರಂದು ಕೃಷಿ ಅಭಿಯಾನ

ಮಡಿಕೇರಿ, ಜೂನ್ 1: ಮಡಿಕೇರಿ ತಾಲ್ಲೂಕು ಕೃಷಿ ಇಲಾಖೆ ವತಿಯಿಂದ ಜೂನ್  2 ರಂದು ಬೆಳಗ್ಗೆ 11 ಗಂಟೆಗೆ ಮಡಿಕೇರಿ ಹೋಬಳಿಯ ಹೊದ್ದೂರು ಗ್ರಾಮದ ಕಬಡಕೇರಿ ದವಸ ಭಂಡಾರದ ಆವರಣದಲ್ಲಿ “ಕೃಷಿ ಅಭಿಯಾನ” ಕಾರ್ಯಕ್ರಮ ನಡೆಯಲಿದೆ. ಕೃಷಿ ಮತ್ತು ಕೃಷಿ ಸಂಬಂಧಿತ ವಿವಿಧ ಇಲಾಖೆಗಳ ವಸ್ತು ಪ್ರದರ್ಶನ, ರೈತರು-ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಸ್ಥಳೀಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮಡಿಕೇರಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: