ದೇಶ

ಅಪೋಲೊ ಆಸ್ಪತ್ರೆಯಿಂದಲೆ ತಮಿಳುನಾಡಿನ ಚುಕ್ಕಾಣಿ ಹಿಡಿದಿರುವ ಮತ್ತೊಬ್ಬ ಮಹಿಳೆ

ಚೆನೈನ ಅಪೋಲೊ ಅಸ್ಪತ್ರೆಯ ಎರಡನೇ ಮಹಡಿಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಚಿಕಿತ್ಸೆ ಪಡೆಯುತ್ತಿದ್ದರೆ, ಮತ್ತೊಬ್ಬ ಮಹಿಳೆ ಅಲ್ಲಿಂದಲೇ ರಾಜ್ಯದ ಚುಕ್ಕಾಣಿ ಹಿಡಿದು ಅಧಿಕಾರ ಚಲಾಯಿಸಿ ರಾಜ್ಯದ ಯೋಗ ಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಈಕೆಯ ಆಜ್ಞೆಗೆ ಅಧಿಕಾರಿಗಳು ಸಚಿವರು, ಸಾಲುಗಟ್ಟಿ ನಿಲ್ಲುತ್ತಾರೆ ಎಂದರೆ ನೀವು ನಂಬಲೇ ಬೇಕು !

ಇದು ನಿಜ, ನಿವೃತ್ತ ಐಎಎಸ್ ಅಧಿಕಾರಿ 62 ವರ್ಷದ ಶೀಲಾ ಬಾಲಕೃಷ್ಣನ್ ಅವರ ಅಣತಿಯಂತೆ ತಮಿಳುನಾಡಿನ ಸಚಿವರು, ಶಾಸಕರು ಕರ್ತವ್ಯ ನಿರ್ವಹಿಸುತ್ತಿದ್ದು ಇವರು ಈಗ ತಮಿಳುನಾಡಿನ ಸೂಪರ್ ಸಿಎಂ. ಆಗಿದ್ದಾರೆ, ಇವರ ಸಾಮರ್ಥ್ಯ ಹಾಗೂ ನಡವಳಿಕೆ ಬಗ್ಗೆ ಜಯಲಲಿತಾ ಅಪಾರ ವಿಶ್ವಾಸ ಹೊಂದಿದ್ದರು, ಈ ಕಾರಣದಿಂದ ಸಿ.ಎಂ. ಸ್ಥಾನದ ಪರ್ಯಾಯ ಸ್ಥಾನವನ್ನು ತುಂಬಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಮೂಲತಃ ಕೇರಳದ ತಿರುವನಂತಪುರದವರಾಗಿದ್ದು 1976ರಲ್ಲಿ ಬ್ಯಾಚ್ ನ  ಐ.ಎ.ಎಸ್. ಅಧಿಕಾರಿಯಾಗಿದ್ದು 2014ರಲ್ಲಿಯೇ ನಿವೃತ್ತರಾಗಿದ್ದಾರೆ. ನಿವೃತ್ತಿಯ ಬಳಿಕ ಇವರನ್ನು ಸಿಎಂ ಜಯಲಲಿತಾ ಅವರ ಅಧಿಕೃತ ಸಲಹೆಗಾರ್ತಿಯಾಗಿ ನೇಮಕ ಮಾಡಿಕೊಂಡಿದ್ದರು. ಇವರು ಅಪೋಲೊ ಆಸ್ಪತ್ರೆಯ ಜಯಾ ಅವರ ಪಕ್ಕದ ಕೋಣೆಯಿಂದಲೇ ರಾಜ್ಯಭಾರ ನಡೆಸುತ್ತಿದ್ದಾರೆ ಎನ್ನಲಾಗಿದೆ.

Leave a Reply

comments

Related Articles

error: