ಮೈಸೂರು

ಪತಿಯ ಅಗಲಿಕೆಯಿಂದ ನೊಂದು ಆತ್ಮಹತ್ಯೆ

ಮೈಸೂರು,ಜೂ.2:- ಪತಿಯ ಅಗಲಿಕೆಯಿಂದ ಮಾನಸಿಕವಾಗಿ ನೊಂದ ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತರನ್ನು ಲಕ್ಷ್ಮಿಪುರಂನ 1ನೇ ಕ್ರಾಸ್‌ ನಿವಾಸಿ ಬಿ.ಟಿ.ಪದ್ಮಾವತಿ (57) ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಮನೆಯಿಂದ ಹೊರ ಹೋಗಿದ್ದ ಅವರ ಪುತ್ರ ಮರಳಿದಾಗ ಕಿಟಕಿಯ ಸರಳಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪತಿ ಮಹೇಶ್ 6 ತಿಂಗಳ ಹಿಂದೆ ಮೃತಪಟ್ಟಿದ್ದರು. ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಪತ್ರ ದೊರೆತಿದ್ದು, ಪತಿಯ ಅಗಲಿಕೆಯಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಲಕ್ಷ್ಮಿಪುರಂ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ. (ವರದಿ: ಕೆ.ಎಸ್,ಎಸ್.ಎಚ್)

Leave a Reply

comments

Related Articles

error: