ಕರ್ನಾಟಕಪ್ರಮುಖ ಸುದ್ದಿಮೈಸೂರು

ಕಬಿನಿ ಅಂಚಿನಲ್ಲಿ ಪ್ರಾಣಿಗಳಿಗೆ ತೊಂದರೆ : ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ ಸಿಬ್ಬಂದಿ

ರಾಜ್ಯ (ಪ್ರಮುಖ ಸುದ್ದಿ) ಮೈಸೂರು, ಜೂ. 2 : ಕಬಿನಿ ಹಿನ್ನೀರು ಅಂಚಿನ ಪ್ರದೇಶದಲ್ಲಿ ಪ್ರವಾಸಿಗರು ಪ್ರಾಣಿಗಳಿಗೆ ತೊಂದರೆ ಕೊಡುತ್ತಿದ್ದರೂ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಈ ಪ್ರದೇಶಕ್ಕೆ ಪ್ರವಾಸಿಗರ ಅಥವಾ ಸಾರ್ವಜನಿಕರ ಪ್ರವೇಶ ನಿಷೇಧವಿದ್ದರೂ ಪ್ರವಾಸಿಗರು ವಾಹನ ಸಮೇತ ಭೇಟಿನೀಡುತ್ತಿದ್ದಾರೆ. ಹೀಗಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಕರ್ತವ್ಯ ಮರೆತಿರುವುದೇಕೆ ಎಂದು ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಬಿನಿ ಹಿನ್ನೀರು ಪ್ರದೇಶದಲ್ಲಿ ನೀರು ಕಡಿಮೆ ಆಗಿದ್ದು ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಭೇಟಿ ಹೆಚ್ಚಾಗಿದೆ. ಆದರೆ ಪ್ರಾಣಿಗಳಿಗೆ ತೊಂದರೆಯಾಗದಂತೆ ದೂರದಿಂವೀಕ್ಷಣೆ ಮಾಡುವ ಬದಲು ಪ್ರಾಣಿಗಳನ್ನು ಕಿಚಾಯಿಸಿ ಖುಷಿಪಡುತ್ತಿದ್ದಾರೆ.

ಕಾಡಿನಲ್ಲಿ ಪ್ರಾಣಿಗಳ ಸಹಜ ಜೀವನಕ್ಕೆ ತೊಂದರೆ ಕೊಡವಂತಹ ಇಂತಹ ಸಂಗತಿಗಳನ್ನು ನಿಯಂತ್ರಿಸಲಿದ್ದಲ್ಲಿ ಅವು ನಾಡಿನತ್ತ ಬರುತ್ತವೆ. ನಾಡಿಗೆ ಬಂದ ಪ್ರಾಣಿಗಳನ್ನು ಜನ ಹೊಡೆದು ಕೊಲ್ಲುತ್ತಿದ್ದಾರೆ. ಇದು ನ್ಯಾಯವೇ ಎಂದು ಪ್ರಾಣಿಪ್ರಿಯರು ಪ್ರಶ್ನೆ ಮಾಡಿದ್ದಾರೆ.

ಆಹಾರ ಅರಸಿ ಅಥವಾ ನೀರು ಕುಡಿಯಲು ಕಾಡಿನ ಅಂಚಿಗೆ ಅಥವಾ ನೈಸರ್ಗಿಕವಾಗಿ ನಿರ್ಮಾಣವಾದ ಹೊಂಡಗಳತ್ತ ಪ್ರಾಣಿ ಪಕ್ಷಿಗಳು ಬರುವುದು ಸಹಜ. ಆದರೆ ಹೀಗೆ ಬಂದ ಪ್ರಾಣಿಗಳನ್ನ ಕಿಚಾಯಿಸುತ್ತಿರುವ ಪುಂಡರು ಅವುಗಳಿಗೆ ತೊಂದರೆ ಕೊಡುತ್ತಿದ್ದಾರೆ.

ಪ್ರವಾಸಿಗರಿಗೆ ಖುಷಿ – ಪ್ರಾಣಿಗಳಿಗೆ ಕಿರಿಕಿರಿ :

ಕಾಲ್ನಡಿಗೆಯಲ್ಲಿ ಮಾತ್ರವಲ್ಲ ವಾಹನಗಳನ್ನೂ ಪ್ರಾಣಿಗಳು ಓಡಾಡುವ ಕಡೆ ತೆಗೆದುಕೊಂಡು ಹೋಗುತ್ತಿರುವ ಪ್ರವಾಸಿಗರು, ಫೋಟೊ ತೆಗೆದು ಪ್ರಾಣಿಗಳ ಜೀವನವನ್ನು ಹತ್ತಿರದಿಂದ ನೋಡಿ ಖುಷಿಪಡಬೇಕೆನ್ನುವ ಹಂಬಲದಲ್ಲಿ ತಮ್ಮಿಂದ ಅವುಗಳಿಗೆ ಆಗುತ್ತಿರುವ ತೊಂದರೆಯನ್ನು ಮರೆತಿದ್ದಾರೆ. ಅಥವಾ ವಿವೇಚನಾ ರಹಿತವಾಗಿ ವರ್ತಿಸುತ್ತಿದ್ದಾರೆ.

ಹೀಗಿದ್ದರೂ ಅರಣ್ಯಾ ಇಲಾಖೆ ಸಿಬ್ಬಂದಿ ಕಣ್ಮುಚಿ ಕುಳಿತಿದ್ದಾರೆ. ಮೈಸೂರಿನ ಕಬಿನಿ ಹಿನ್ನಿರಿನ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಾರಿನಲ್ಲಿ ಬಂದು ಆನೆ ಮತ್ತು ಆನೆಮರಿಯನ್ನು ಸುತ್ತುವರಿದು ತೊಂದರೆ ಕೊಡುತ್ತಿರುವ ದೃಶ್ಯಗಳನ್ನು ನೀವು ಈ ಚಿತ್ರಗಳಲ್ಲಿ ನೋಡಬಹುದು.

-ಎಸ್‍.ಎನ್‍/ಆರ್‍.ವಿ/ಎನ್‍.ಬಿ.ಎನ್.

Leave a Reply

comments

Related Articles

error: