ಕರ್ನಾಟಕಪ್ರಮುಖ ಸುದ್ದಿಮೈಸೂರು

ಇಡೀ ದೇಶದಲ್ಲಿ ಹೆಚ್ಚು ತೊಡುವ ಸಮವಸ್ತ್ರ ಖಾಕಿ; ಪೊಲೀಸರು ಜಾತ್ಯತೀತರಾಗಿರಬೇಕು: ಸುಬ್ರಹ್ಮಣ್ಯೇಶ್ವರ ರಾವ್

ರಾಜ್ಯ (ಪ್ರಮುಖ ಸುದ್ದಿ) ಮೈಸೂರು, ಜೂ. 2 : ಪೊಲೀಸ್ ಇಲಾಖೆ ಮೈಸೂರು ನಗರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗುತ್ತಿರುವ ಸಿಬ್ಬಂದಿವರ್ಗಕ್ಕೆ ಗುರುವಾರ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಇದರ ಜೊತೆಗೆ ಪೊಲೀಸ್ ಸಿಬ್ಬಂದಿಯ ಮಕ್ಕಳಲ್ಲಿ ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಪ್ರಧಾನ ಮಾಡಲಾಯಿತು.

ಪೊಲೀಸ್ ಆಯುಕ್ತರಾದ ಡಾ. ಸುಬ್ರಮಣ್ಯೇಶ್ವರ ರಾವ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಸುಬ್ರಮಣೇಶ್ವರ ರಾವ್ ಖಡಕ್‌ ಮಾತು :

ಪೊಲೀಸ್ ಇಲಾಖೆಗೆ ಬಂದವರು ತಮ್ಮ ಕಡೆಯ ಉಸಿರು ಇರುವವರೆಗೂ ಪೋಲಿಸರಾಗಿಯೇ ಇರ್ತಾರೆ. ಪೊಲೀಸ್ ಇಲಾಖೆಯಿಂದ ನಿವೃತ್ತರಾಗಬಹುದು. ಆದರೆ, ನೀವು ಆಕ್ಟೀವ್ ಪೊಲೀಸರ ಹಾಗೇ ಇರ್ತೀರಿ. ಕೇವಲ ಕೆಲಸಕ್ಕೆ ಮಾತ್ರ ನಿವೃತ್ತಿ ಕೊಡ್ತೀರಿ. ಆದರೆ, ನಿಮ್ಮ ಕೊಡುಗೆ ಸಮಾಜಕ್ಕೆ ಇದ್ದೇ ಇರುತ್ತದೆ. ಪೊಲೀಸರಿಗೆ ಜಾತಿ, ಧರ್ಮ ಎನ್ನುವುದು ಏನೂ ಇಲ್ಲ. ನಾವೆಲ್ಲರೂ ಒಂದೇ. ನಮ್ಮ ವೃತ್ತಿಯಲ್ಲಿ ಜಾತಿ ಧರ್ಮವನ್ನು ಅಡ್ಡ ತಂದವರು ಖಾಕಿ ಬಟ್ಟೆ ಹಾಕಲು ಯೋಗ್ಯರಲ್ಲ. ಇಡೀ ದೇಶದಲ್ಲಿ ಅತಿ ಹೆಚ್ಚು, ಒಂದೇ ರೀತಿಯಲ್ಲಿ ಯೂನಿಫಾರ್ಮ್ ಹಾಕೋದು ಎಂದರೆ ಅದು ಖಾಕಿ ಬಟ್ಟೆ ಮಾತ್ರ. ಹೀಗಾಗಿ ಎಲ್ಲರೂ ಜನರಿಗಾಗಿ ಸಮಾಜಕ್ಕಾಗಿ ಕೆಲಸ ಮಾಡಬೇಕು” ಎಂದು ನಗರ ಪೊಲೀಸ್ ಆಯುಕ್ತರಾದ ಸುಬ್ರಮಣೇಶ್ವರ ರಾವ್ ಅವರು ಖಡಕ್ ಮಾತುಗಳಲ್ಲಿ ಹೇಳಿದರು.

ಪೊಲೀಸ್ ಇಲಾಖೆ ಸಿಬ್ಬಂದಿಯ ಮಕ್ಕಳಿಗೆ ಈಗ ಸಣ್ಣದಾಗಿ ಪ್ರೋತ್ಸಾಹ ಧನ ನೀಡಲು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಲ್ಯಾಪ್‌ಟಾಪ್, ಟ್ಯೂಷನ್ ಕಲಿಕೆಗಾಗಿ ಪ್ರೋತ್ಸಾಹ ಸೇರಿದಂತೆ ಅನೇಕ ಸೌಲಭ್ಯ ಕಲ್ಪಿಸಲಾಗುವುದು ಎಂದರು.

-ಎಸ್.ಎನ್/ಎನ್.ಬಿ.ಎನ್.

Leave a Reply

comments

Related Articles

error: