ಮೈಸೂರು

‘ನಾನು ಕನ್ನಂಬಾಡಿ ಕಟ್ಟೆ-ಹೀಗೊಂದು ಆತ್ಮಕಥೆ’ ಪುಸ್ತಕ ಲೋಕಾರ್ಪಣೆ: ಜೂನ್ 4 ರಂದು

ಮೈಸೂರು, ಜೂ.2: ಇತಿಹಾಸ ತಜ್ಞ ಪ್ರೊ. ಪಿ.ವಿ. ನಂಜರಾಜ ಅರಸ್  ಅವರು ಬರೆದಿರುವ ‘ನಾನು ಕನ್ನಂಬಾಡಿ ಕಟ್ಟೆ-ಹೀಗೊಂದು ಆತ್ಮಕಥೆ’ ಪುಸ್ತಕ ಜೂನ್ 4 ರಂದು ಲೋಕಾರ್ಪಣೆಗೊಳ್ಳಲಿದೆ.  ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬೆಳಿಗ್ಗೆ 11.30 ಕ್ಕೆ ಸಿಎಂ ಸಿದ್ದರಾಮಯ್ಯ ಪುಸ್ತಕ  ಬಿಡುಗಡೆ ಮಾಡಲಿದ್ದಾರೆ.

ಈ ಕೃತಿ ಬಗ್ಗೆ ಮಾತನಾಡಿರುವ ಅವರು, ಕನ್ನಂಬಾಡಿ ಕಟ್ಟೆ ಕಟ್ಟಿದ್ದು ಸರ್.ಎಂ. ವಿಶ್ವೇಶ್ವರಯ್ಯ ಅಲ್ಲ ಎಂಬುದನ್ನು ನಿರೂಪಿಸುವ ಪುಸ್ತಕವಿದು. ಇದಕ್ಕಾಗಿ ಹಲವಾರು ದಾಖಲೆಗಳ ಸಮೇತ ಪುಸ್ತಕ ಬರೆದಿದ್ದೇನೆ. ಕೆ.ಆರ್.ಎಸ್. ಡ್ಯಾಂ ನಿರ್ಮಾಣ ಮಾಡಿದ್ದು ವಿಶ್ವೇಶ್ವರಯ್ಯ ಎಂಬ ತಪ್ಪು ಭಾವನೆ ಜನರಲ್ಲಿದೆ. ಪುಸ್ತಕದಲ್ಲಿ ಅದರ ಸತ್ಯಾನ್ವೇಷಣೆಯಿದೆ. ಇತಿಹಾಸವನ್ನು ತಿರುಚಿ ಡ್ಯಾಂ ನಿರ್ಮಾಣದ ಕಥೆ ಕಟ್ಟಲಾಗಿತ್ತು, ಆದರೆ ಕನ್ನಂಬಾಡಿ ಆತ್ಮಕಥೆಯಲ್ಲಿ ಸತ್ಯವನ್ನು ತೆರೆದಿಟ್ಟೆದ್ದೇನೆ ಎಂದು ನಂಜರಾಜ ಅರಸ್ ಅವರು ಹೇಳಿದ್ದಾರೆ. (ವರದಿ: ಆರ್.ವಿ, ಎಲ್.ಜಿ)

Leave a Reply

comments

Related Articles

error: