ಮೈಸೂರು

ನೂತನ ಕುಲಪತಿ ನೇಮಕ ಆಯ್ಕೆ ಸಮಿತಿಗೆ ಪ್ರೊ.ಕುಟಿನೊ ಹೆಸರು

ಮೈಸೂರು,ಜೂ.2:-  ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರ ತೀವ್ರ ವಿರೋಧದ ನಡುವೆಯೂ  ನೂತನ ಕುಲಪತಿ ನೇಮಕ ಸಂಬಂಧ ಆಯ್ಕೆ ಸಮಿತಿಗೆ ವಿಶ್ರಾಂತ ಕುಲಪತಿ ಪ್ರೊ.ಕುಟಿನೊ ಅವರ ಹೆಸರನ್ನು ಸೂಚಿಸಲಾಗಿದೆ.

ಮೈಸೂರು ವಿಶ್ವವಿದ್ಯಾಲಯದ ಕಾರ್ಯಸೌಧದಲ್ಲಿ ಸಿಂಡಿಕೇಟ್ ಸದಸ್ಯರ ಸಭೆ ನಡೆದಿದ್ದು ಸಭೆಯಲ್ಲಿ ಪಾಲ್ಗೊಂಡ ಹಂಗಾಮಿ ಕುಲಪತಿ ಪ್ರೊ.ಮಾನೆ, ಪರೀಕ್ಷಾಂಗ ಕುಲಸಚಿವ ಸೋಮಶೇಖರ್ ಸೇರಿದಂತೆ ಹಲವರು ಪ್ರೊ.ಕುಟಿನೊ  ಹೆಸರು ಪ್ರಸ್ತಾಪವಾಗುತ್ತಿದ್ದಂತೆ ವಿರೋಧ ವ್ಯಕ್ತಪಡಿಸಿದರು. ಆದರೆ ಸರ್ಕಾರದಿಂದ ನಿರ್ದೇಶಿತಗೊಂಡ ಸಿಂಡಿಕೇಟ್ ಸದಸ್ಯರು ಕುಟಿನೋ ಹೆಸರನ್ನು ಬೆಂಬಲಿಸಿದರು. ವಿರೋಧ ವ್ಯಕ್ತವಾದವರ ಸಂಖ್ಯೆ ಕಡಿಮೆಯಾಗಿ, ಬೆಂಬಲಿಸಿದವರ ಸಂಖ್ಯೆ ಅಧಿಕವಾಗಿ ಪ್ರೊ.ಕುಟಿನೊ  ಹೆಸರು ಆಯ್ಕೆಯಾಗಿದೆ ಎಂದು ತಿಳಿದುಬಂದಿದೆ. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: