ಕರ್ನಾಟಕಪ್ರಮುಖ ಸುದ್ದಿ

ಉಗ್ರ ಇಮ್ರಾನ್ ಬಿಲಾಲ್‍ಗೆ ಜೀವಾವಧಿ ಶಿಕ್ಷೆ

56ನೇ ಸೆಷನ್ಸ್ ನ್ಯಾಯಾಲಯ ಲಷ್ಕರ್-ಎ-ತೋಯ್ಬಾ ಸಂಘಟನೆಯ ಉಗ್ರ ಇಮ್ರಾನ್ ಬಿಲಾಲ್‍ಗೆ ಜೀವಾವಧಿ ಶಿಕ್ಷೆ ಘೋಷಿಸಿದೆ.

ಬೆಂಗಳೂರಿನ ಹಲವೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಆರೋಪದ ಮೇಲೆ 2007ರ ಜ.5ರಂದು ಸಿಸಿಬಿ ಪೊಲೀಸರು ಆತನನ್ನು ಬಂಧಿಸಿದ್ದರು. ನಿನ್ನೆ ವಿಚಾರಣೆ ನಡೆಸಿದ 56ನೇ ಸೆಷನ್ಸ್ ನ್ಯಾಯಾಲಯ ಆತನ ಮೇಲಿದ್ದ ಆರೋಪ ಸಾಬೀತಾಗಿದ್ದು ಅವನನ್ನು ಅಪರಾಧಿ ಎಂದು ತೀರ್ಪು ನೀಡಿತ್ತು.

ಕರ್ನಾಟಕದ ಪ್ರಮುಖ ಕಂಪನಿಗಳಾದ ಇನ್‍ಫೋಸಿಸ್ ಮತ್ತು ವಿಪ್ರೋ ಮೇಲೆ ದಾಳಿ ನಡೆಸಲು ಬಳ್ಳಾರಿಯಿಂದ ಬರುತ್ತಿದ್ದ ಸಂದರ್ಭ ಸಿಸಿಬಿ ಪೊಲೀಸರು ಈತನನ್ನು ಬಂಧಿಸಿದ್ದರು. ಬಂಧಿತನಿಂದ ಎಕೆ 56 ಗನ್, ಸ್ಯಾಟಲೈಟ್ ಫೋನ್, 5 ಗ್ರೇನೇಡ್‍ಗಳು ಮತ್ತು 300 ಸುತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಇಮ್ರಾನ್ ಬಿಲಾಲ್ ಜಮ್ಮು-ಕಾಶ್ಮೀರದವನಾಗಿದ್ದು, ಪಾಕಿಸ್ತಾನದಲ್ಲಿ ಉಗ್ರ ತರಬೇತಿ ಪಡೆದಿದ್ದ ಎನ್ನಲಾಗಿದೆ.

Leave a Reply

comments

Related Articles

error: