ಮೈಸೂರು

ಪರ್ವತಾರೋಹಣಕ್ಕೆ ಅರ್ಜಿ ಆಹ್ವಾನ ಆಹ್ವಾನ

ಮೈಸೂರು, ಜೂ. 3 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಂಗಸಂಸ್ಥೆಯಾದ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಆಕಾಡೆಮಿಯು ರಾಜ್ಯದ ಯುವಜನರಿಗೆ ಪ್ರಪ್ರಥಮ ಬಾರಿಗೆ ಹಿಮಾಲಯ ಪರ್ವತದಲ್ಲಿ 28 ದಿನಗಳ ಕಾಲ ಪರ್ವತಾರೋಹಣ ಶಿಬಿರವನ್ನು ಆಯೋಜಿಸಲಿದೆ.

18 ರಿಂದ 40 ವರ್ಷ ವಯೋಮಿತಿಯೊಳಗಿನ ಉತ್ತಮ ಆರೋಗ್ಯ ಹೊಂದಿರುವ, ದೈಹಿಕವಾಗಿ ಸದೃಢರಾಗಿರುವ, ಈ ಪರಿಸರಕ್ಕೆ ಹೊಂದಿಕೊಳ್ಳುವಂತಹ, ಮೈಸೂರು ಜಿಲ್ಲೆಯಿಂದ ಆಸಕ್ತಿಯುಳ್ಳ ಇಬ್ಬರು ಯುವಕ/ಯುವತಿ ಅಭ್ಯರ್ಥಿಗಳನ್ನು ಆಯ್ಕೆ ಪ್ರಕ್ರಿಯೆಗೆ ಒಳಪಡಿಸಿ ಆಯ್ಕೆಯಾದ ಅಭ್ಯರ್ಥಿಗಳನ್ನು ಬೇಸಿಕ್ ಪರ್ವತಾರೋಹಣ ಶಿಬಿರಕ್ಕೆ ಕಳುಹಿಸಿಕೊಡಲಾಗುವುದು. ಆಸಕ್ತ ಯುವಕ/ಯುವತಿ ಅಭ್ಯರ್ಥಿಗಳು ಜೂನ್ 20 ರ ಒಳಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು. ಅರ್ಜಿ ನಮೂನೆಯು ಸಾಹಸ ಆಕಾಡೆಮಿಯ ವೆಬ್‍ಸೈಟ್ www.gethnaa.com ಇಂದ ಪಡೆದು ಜೇತನಾ ಕಛೇರಿಗೆ ಸಲ್ಲಿಸಬಹುದಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜ಼ರ್‍ಬಾದ್, ಮೈಸೂರು ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 0821-2564179 ರ ಮೂಲಕ ಹಾಗೂ ಜೇತನಾ ಇಲ್ಲಿನ ದೂರವಾಣಿ ಸಂಖ್ಯೆ 080-22210454ರ ಮೂಲಕ ಸಂಪರ್ಕಿಸಬಹುದಾಗಿದೆ.

-ಎನ್.ಬಿ.ಎನ್.

Leave a Reply

comments

Related Articles

error: