ಕರ್ನಾಟಕಮೈಸೂರು

ಎಸ್.ಡಿ.ವಿ.ಎಸ್ ವಿದ್ಯಾಸಂಸ್ಥೆ : ರಾಜ್ಯ ಮಟ್ಟಕ್ಕೆ ಆಯ್ಕೆ

ಯಳಂದೂರು ಪಟ್ಟಣದ ಎಸ್.ಡಿ.ವಿ.ಎಸ್.ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಗಳಿಸಿ ಇದೀಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯ ಶಿಕ್ಷಕಿ ಎಲ್.ಶೃತಿ ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು ಎಸ್.ಡಿ.ವಿ.ಎಸ್.ವಿದ್ಯಾಸಂಸ್ಥೆಯು ಕೇವಲ ಬೋಧನ ಕ್ರಮದಲ್ಲಿ ಮಾತ್ರ ನಿರತವಾಗಿರದೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳನ್ನು ಪರಿಪೂರ್ಣವಾಗಿ ತೊಡಗಿಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯನಿರ್ವಹಿಸುತ್ತಿದೆ ಎಂದರು.

ಪ್ರಾಥಮಿಕ ಶಾಲಾ ವಿಭಾಗದ ರಸಪ್ರಶ್ನೆಯಲ್ಲಿ ದೀಪಕ್ ಮತ್ತು ತಂಡ, ಕವ್ವಾಲಿಯಲ್ಲಿ ಮುಸ್ಕಾನ್ ಮತ್ತು ತಂಡ, ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಎಸ್.ಆರ್.ಸಂಜನಾ, ಇಂಗ್ಲೀಷ್ ಕಂಠಪಾಠ ಲಘುಸಂಗೀತದಲ್ಲಿ ವಿ.ಅಮೃತಾ, ಚಿತ್ರಕಲೆಯಲ್ಲಿ ನಿತಿನ್, ಪ್ರೌಢಶಾಲಾ ವಿಭಾಗದ ಕನ್ನಡ ಭಾಷಣದಲ್ಲಿ ನವೀನ್ ಕುಮಾರ್, ಭರತನಾಟ್ಯದಲ್ಲಿ ಜಿ.ವರ್ಷಿತಾ, ಗಝಲ್ ನಲ್ಲಿ ಹೂರ್ ಭಾನು ಪ್ರಥಮ ಸ್ಥಾನ ಪಡೆದಿದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದರು.

ಎಂ.ಬಿ.ಪೂಜಾ ಕ್ರೀಡಾ ಕೂಟದ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಭುವನೇಶ್ವರಿ ಎತ್ತರ ಜಿಗಿತದಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭ ಸಂಸ್ಥೆಯ ಸಂಸ್ಥಾಪಕ ದುಗ್ಗಹಟ್ಟಿ ಪಿ.ರವೀಂದ್ರಪ್ಪ, ಅಧ್ಯಕ್ಷ ವಿ.ಮಲ್ಲಿಕಾರ್ಜುನ ಸ್ವಾಮಿ, ಕಾರ್ಯದರ್ಶಿ ವಿ.ಗಂಗಾಧರ ಸ್ವಾಮಿ, ಆಡಳಿತಾಧಿಕಾರಿ ನಾಗರಾಜಪ್ಪ ಉಪಸ್ಥಿತರಿದ್ದರು.

Leave a Reply

comments

Related Articles

error: