ಮೈಸೂರು

ಸಮಾವೇಶಕ್ಕೆ ಬಂದಿದ್ದ ಬಸ್ ಬೈಕ್ ಗೆ ಡಿಕ್ಕಿ : ಇಂಜಿನಿಯರಿಂಗ್ ವಿದ್ಯಾರ್ಥಿ ಸ್ಥಿತಿ ಗಂಭೀರ

ಮೈಸೂರು,ಜೂ.3:-  ಕೊಟ್ಟ ಮಾತು ದಿಟ್ಟ ಸಾಧನೆ ಸಮಾವೇಶಕ್ಕೆ ಬಂದಿದ್ದ ಬಸ್  ಬೈಕ್ ಗೆ ಡಿಕ್ಕಿ  ಹೊಡೆದ ಪರಿಣಾಮ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಗಾಯಗೊಂಡವರನ್ನು ಗಿರಿದರ್ಶಿನಿ ಲೇಔಟ್ ನಿವಾಸಿ  ಬೆಳಗಾವಿ ಮೂಲದ ವರದರಾಜ್ ಎಂದು ಗುರುತಿಸಲಾಗಿದೆ.ಮೈಸೂರು ತಿ.ನರಸೀಪುರ ಮುಖ್ಯರಸ್ತೆ ವೈದ್ಯರ ಸಮುದಾಯ ಭವನದ ಬಳಿ ಚಾಮರಾಜನಗರದಿಂದ ಸಾಧನಾ ಸಮಾವೇಶಕ್ಕೆ ಜನರನ್ನು ಕರೆತಂದಿದ್ದ ಬಸ್  ಸಮಾವೇಶ ಮುಗಿಸಿ ವಾಪಸ್ ತೆರಳುವಾಗ ಚಾಮರಾಜನಗರದ ಇಂಜಿನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವರದರಾಜ್  ಬೈಕ್ ಗೆ ಡಿಕ್ಕಿ ಹೊಡೆದಿದೆ. ವರದರಾಜ್ ಸ್ನೇಹಿತರ ಜೊತೆ ತನ್ನ ಬೈಕ್ ನಲ್ಲಿ ತಿ.ನರಸೀಪುರದ ಕಡೆ ತೆರಳುತ್ತಿದ್ದ ಎನ್ನಲಾಗಿದೆ. ಗಾಯಾಳು ವಿದ್ಯಾರ್ಥಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಿದ್ಧಾರ್ಥ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ:ಕೆ.ಎಸ್,ಎಸ್.ಎನ್,ಎಸ್.ಎಚ್)

Leave a Reply

comments

Related Articles

error: