ಸುದ್ದಿ ಸಂಕ್ಷಿಪ್ತ

ಲೈಟ್‍ಹೌಸ್ ಟ್ರಸ್ಟ್ ಉದ್ಘಾಟನೆ

ಲೈಟ್‍ಹೌಸ್ ಟ್ರಸ್ಟ್ ನ ಉದ್ಘಾಟನಾ ಸಮಾರಂಭವು ಅ.2ರಂದು ಮೈಸೂರಿನ ಐಡಿಯಲ್ ಜಾವ ರೋಟರಿ ಶಾಲೆಯ ಸಭಾಂಗಣದಲ್ಲಿ ನೆರವೇರಿತು.

ಮೈಸೂರು ಸೈನ್ಸ್ ಫೌಂಡೇಶನ್‍ನ ಕಾರ್ಯದರ್ಶಿಗಳಾದ ಜಿ.ಬಿ. ಸಂತೋಷ್‍ ಕುಮಾರ್ ಉದ್ಘಾಟನೆ ನೆರವೇರಿಸಿ ಮಾತನಾಡಿ, ಇಂದಿಗೂ ಸಮಾಜದಲ್ಲಿ ಅನೇಕ ಪ್ರಕಾರದ ಮೌಢ್ಯಾಚರಣೆಗಳಿವೆ. ವೈಜ್ಞಾನಿಕ ಆಧಾರವಿಲ್ಲದೆ ಆಚರಣೆಗಳು, ಸಮಾಜಕ್ಕೆ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಆ ನಿಟ್ಟಿನಲ್ಲಿ ಪ್ರತಿಯೊಂದು ಸಂಘ-ಸಂಸ್ಥೆಗಳು ಟ್ರಸ್ಟ್‍ಗಳು ಮೌಢ್ಯರಹಿತ ವಿಜ್ಞಾನವನ್ನು ಹಂಚುವಂತಾಗಬೇಕೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮೈಸೂರು ನಗರಸಭೆ ಸದಸ್ಯರಾದ ಎಂ. ಸುನಿಲ್, ಪ್ರಿಯಾ ಕನ್‍ಸ್ಟ್ರಕ್ಷನ್ ಮಾಲೀಕರಾದ ನಂದೀಶ್ ಕೆ.ಜೆ. ಉಪಸ್ಥಿತರಿದ್ದರು.

Leave a Reply

comments

Related Articles

error: