ಮೈಸೂರು

ಜೂನ್ 6 ರಂದು ಸಿಎಂ ನಿವಾಸದ ಎದುರು ಗೋಪೂಜೆ ನಡೆಸಲಿದ್ದೇವೆ : ಚೇತನ್ ಮಂಜುನಾಥ್

ಮೈಸೂರು,ಜೂ.4:- ಕೇಂದ್ರ ಸರ್ಕಾರ ದೇಶಾದ್ಯಂತ ಗೋ ಹತ್ಯೆ  ಅಥವಾ ಕಸಾಯಿಖಾನೆಗೆ ಗೋ ಮಾರಾಟವನ್ನು ನಿಷೇಧಿಸಿ ಕಾನೂನು ಹೊರಡಿಸಿದೆ.ಇದರಿಂದ ಹಲವಾರು ವರ್ಷದ ಬಹುಸಂಖ್ಯಾತರ ಬೇಡಿಕೆ ಈಡೇರಿದಂತಾಗಿದೆ.  ಗೋವುಗಳ ರಕ್ಷಣೆಗೆ ಮುಂದಾಗಬೇಕಿದ್ದ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯರವರು ಸ್ವತಃ ಗೋ ಭಕ್ಷಕರಾಗಿರುವುದು ಖಂಡನೀಯ, ಆದ್ದರಿಂದ ಮುಖ್ಯ ಮಂತ್ರಿಗಳ ಮನೆ ಎದುರು ಗೋ ಪೂಜೆ ಮಾಡಲಾಗುವುದು ಎಂದು ಅಖಂಡ ಭಾರತ ಸೇವಾ ಸೇನಾ ಸಂಸ್ಥಾಪಕ ಅಧ್ಯಕ್ಷ ಚೇತನ್ ಮಂಜುನಾಥ್ ತಿಳಿಸಿದರು.

ಮೈಸೂರು  ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೂನ್ 6 ರಂದು ಮೈಸೂರಿನಲ್ಲಿರುವ ಮುಖ್ಯ ಮಂತ್ರಿಗಳ ಮನೆ ಮುಂದೆ ಅವರ  ಗಮನ ಸೆಳೆಯುವ ನಿಟ್ಟಿನಲ್ಲಿ ಗೋ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕೇಂದ್ರ ಸರ್ಕಾರದ ಈ ನಿರ್ಣಯವನ್ನು ಎಲ್ಲ ರಾಜ್ಯಗಳಲ್ಲಿಯೂ ಅನುಷ್ಠಾನಗೊಳಿಸಬೇಕು.  ಕರ್ನಾಟಕ ಸೇರಿದಂತೆ ಇನ್ನೂ ಕೆಲವು ರಾಜ್ಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿರುವುದು ದೌರ್ಭಾಗ್ಯಕರ ಸಂಗತಿ.  ಕೇಂದ್ರ ಸರ್ಕಾರ ಈ ವಿಧೇಯಕವನ್ನು ಅನುಷ್ಠಾನಗೊಳಿಸದ ಎಲ್ಲಾ ರಾಜ್ಯ ಸರ್ಕಾರದ ವಿರುದ್ಧ ಸಂವಿಧಾನಾತ್ಮಕವಾಗಿ ಕಠಿಣ ಕ್ರಮ,  ಕೈಗೊಳ್ಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಅಖಂಡ ಭಾರತ ಸೇವಾ ಸೇನಾ ಸದಸ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: