ಪ್ರಮುಖ ಸುದ್ದಿವಿದೇಶ

ಲಂಡನ್‍ನಲ್ಲಿ ಮತ್ತೆ ಉಗ್ರರ ಅಟ್ಟಹಾಸ : 7 ಸಾವು, 48 ಮಂದಿಗೆ ಗಂಭೀರ ಗಾಯ

ವಿದೇಶ (ಪ್ರಮುಖ ಸುದ್ದಿ) ಲಂಡನ್, ಜೂ. 4 : ಲಂಡನ್‍ನ ಎರಡು ಪ್ರಮುಖ ಪ್ರದೇಶಗಳಲ್ಲಿ ಮತ್ತೆ ಉಗ್ರರು ದಾಳಿ ನಡೆಸಿದ್ದು, ಜನನಿಬಿಡ ಪ್ರದೇಶದಲ್ಲಿ ಪಾದಚಾರಿಗಳ ಮೇಲೆ ಅಡ್ಡಾದಿಡ್ಡಿ ಟ್ರಕ್ ಓಡಿಸಿ ಮತ್ತು ಚಾಕುಗಳಿಂದ ಚುಚ್ಚಿ ಅಟ್ಟಹಾಸ ಮೆರೆದಿದ್ದಾರೆ.

ಯುಕೆ ಕಾಲಮಾನದ ಪ್ರಕಾರ ಶನಿವಾರ ರಾತ್ರಿ 10 ಗಂಟೆ 8 ನಿಮಿಷದ ಸಮಯದಲ್ಲಿ ಉಗ್ರರು ಏಕಕಾಲದಲ್ಲಿ ದಾಳಿ ಮಾಡಿದ ಕಾರಣ 7 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಪ್ರತಿಷ್ಟಿತ ಲಂಡನ್ ಬ್ರಿಡ್ಜ್  ಬಳಿ ಉಗ್ರನೋರ್ವ ವ್ಯಾನ್ ಒಂದನ್ನ ಅಡ್ಡಾದಿಡ್ಡಿ ಚಾಲಾಯಿಸಿದ ಪರಿಣಾಮ ಬ್ರಿಡ್ಜ್ ಮೇಲಿದ್ದ 48 ಮಂದಿಗೆ ಗಾಯಗಳಾದವು.

ವಾರಾಂತ್ಯದ ಬಿಡುವು ಇದ್ದ ಕಾರಣ ಲಂಡನ್ ಬ್ರಿಡ್ಜ್ ಬಳಿ ಹೆಚ್ಚಿನ ಜನ ಜಮಾಯಿಸಿದದರು. ಇಂತಹ ಸಂದರ್ಭವನ್ನೇ ಆಯ್ಕೆ ಮಾಡಿಕೊಂಡಿರುವ ಉಗ್ರಗಾಮಿಯೋರ್ವ ವ್ಯಾನ್ ಅನ್ನು ವೇಗವಾಗಿ ಪಾದಾಚಾರಿಗಳ ಮೇಲೆ ಹರಿಸಿದ್ದಾನೆ. ಪರಿಣಾಮ ಸ್ಥಳದಲ್ಲೇ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ನಡೆದ 8 ನಿಮಿಷಗಳೊಳಗೆ ಮೂವರು ಉಗ್ರರನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.

ತದನಂತರ ಇತ್ತೀಚಿನ ವರದಿಗಳ ಪ್ರಕಾರ ಈ ದಾಳಿಗಳಲ್ಲಿ ಒಟ್ಟು 7 ಮಂದಿ ಸಾವನ್ನಪ್ಪಿದ್ದು, 48 ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾರೋ ಮಾರ್ಕೆಟ್ ಸಮೀಪವೂ ಉಗ್ರರು ದಾಳಿ ನಡೆಸಿದ್ದು, ಇಲ್ಲಿ ಉಗ್ರರು ಹರಿತವಾದ ಚಾಕುಗಳನ್ನು ಬಳಸಿ ಎದುರಿಗೆ ಸಿಕ್ಕ ಎಲ್ಲ ಜನರಿಗೆ ಇರಿದಿದ್ದಾರೆ. ಪರಿಣಾಮ ಅಲ್ಲಿಯೂ ಸಾಕಷ್ಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ

ಉಗ್ರರು ಕಳೆದ ಕೆಲವು ತಿಂಗಳುಗಳ ಹಿಂದೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್‍ನಲ್ಲೂ ದಾಳಿ ನಡೆಸಲು ಟ್ರಕ್‍ಗಳನ್ನು ಬಳಿಸಿದ್ದರು. ಲಂಡನ್‍ನಲ್ಲೂ ಅದೇ ಮಾದರಿಯಲ್ಲಿ ಈಗ ಟ್ರಕ್, ಮತ್ತು ಚಾಕುಗಳಿಂದ ದಾಳಿ ನಡೆಸಿದ್ದಾರೆ. ಕಠಿಣ ಭದ್ರತಾ ವ್ಯವಸ್ಥೆ ಇರುವ ಕಾರಣ ಉಗ್ರರು ಬಾಂಬ್‍ಗಳನ್ನು ಬಿಟ್ಟು ಇಂತಹ ಮಾರ್ಗ ಹಿಡಿದ್ದಾರೆ ಎನ್ನಲಾಗುತ್ತಿದೆ.

-ಎನ್.ಬಿ.ಎನ್.

Leave a Reply

comments

Related Articles

error: