ಕರ್ನಾಟಕಪ್ರಮುಖ ಸುದ್ದಿ

ಕಿಟಕಿ ಮೂಲಕ ನುಗ್ಗಿ ಚಿನ್ನಾಭರಣ ಕಳುವು

ರಾಜ್ಯ(ಮಂಡ್ಯ)ಜೂ.5 :- ದುಷ್ಕರ್ಮಿಗಳಿಂದ ಕಿಟಕಿ ಮೂಲಕ ಮನೆಯಲ್ಲಿದ್ದ  ಚಿನ್ನಾಭರಣಗಳನ್ನು  ಕಳವು ಮಾಡಿದ ಘಟನೆ ನಾಗಮಂಗಲ ಪಟ್ಟಣದ ಕೊಳದ ಬೀದಿ ಬಳಿ ನಡೆದಿದೆ.

ನಾಗಮಂಗಲ ಪಟ್ಟಣದ ಕೊಳದ ಬೀದಿಯ ಪ್ರಕಾಶ್ ಎಂಬುವರ ಮನೆಯಲ್ಲಿ  ಸೋಮವಾರ ಮುಂಜಾನೆ ಕಿಟಕಿಯ ಮೂಲಕ ಮನೆಯೊಳಗೆ ನುಗ್ಗಿದ ಕಳ್ಳರು ಚಿನ್ನದ ಮಾಂಗಲ್ಯ ಸರ , ಓಲೆ, ಮತ್ತು ಉಂಗುರ ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ಮನೆಯ ಮಾಲಿಕ ಪ್ರಕಾಶ್ ನಾಗಮಂಗಲ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಶ್ವಾನದಳ ಮತ್ತು ಬೆರಳಚ್ಚು ತಜ್ಞರು  ಪರಿಶೀಲನೆ ನಡೆಸಿದ್ದಾರೆ.

ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: