ಪ್ರಮುಖ ಸುದ್ದಿ

ಆತ್ಮಾಹುತಿ ಬಾಂಬ್ ದಾಳಿಗೆ ಯತ್ನ: ನಾಲ್ವರು ಉಗ್ರರ ಹತ್ಯೆ

ಪ್ರಮುಖ ಸುದ್ದಿ, ನವದೆಹಲಿ, ಜೂ.5: ಸಿಆರ್ ಪಿಎಫ್ ಕ್ಯಾಂಪ್ ಮೇಲೆ ಆತ್ಮಾಹುತಿ ದಾಳಿ ನಡೆಸಲು ಯತ್ನಿಸಿದ ನಾಲ್ವರು ಉಗ್ರರನ್ನು ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಹೊಡೆದುರುಳಿಸಿದೆ.

ಸೋಮವಾರ ಬೆಳಗಿನ ಜಾವ 4.10ರ ಸುಮಾರಿನಲ್ಲಿ ಸಿಆರ್ ಪಿಎಫ್ ಕ್ಯಾಂಪ್ ಮೇಲೆ ಆತ್ಮಾಹುತಿ ದಾಳಿ ನಡೆಸಲು ಯತ್ನಿಸಿದರು. ಇದನ್ನಿರಿತ ಸೇನಾ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡು ಉಗ್ರರ ಮೇಲೆ ಗುಂಡಿನ ಮಳೆಗರೆದು ನಾಲ್ವರನ್ನು ಹತ್ಯೆಗೈದಿದ್ದಾರೆ. ಸ್ಥಳದಲ್ಲಿ ನಾಲ್ವರು ಉಗ್ರರ ಶವಗಳು ಪತ್ತೆಯಾಗಿದ್ದು, ಎಕೆ 47 ರೈಫಲ್ಸ್ ಗಳು, 1 ಯುಬಿಜಿಎಲ್ ಮತ್ತು ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪದೇ ಪದೇ ಗಡಿಭಾಗದಲ್ಲಿ ನುಸುಳುವ ಉಗ್ರರಿಗೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದೆ. (ವರದಿ ಬಿ.ಎಂ)

 

Leave a Reply

comments

Related Articles

error: