ಮೈಸೂರು

ಕನ್ನಡ ಮತ್ತು ಕನ್ನಡಿಗರನ್ನು ಉಳಿಸಲು ಸಹಿ ಸಂಗ್ರಹ ಚಳುವಳಿ

ಮೈಸೂರು.ಜೂ.5;- ಸಿ.ಎಫ್.ಟಿ.ಆರ್. ನಲ್ಲಿ ಕನ್ನಡ ಮತ್ತು ಕನ್ನಡಿಗರನ್ನು ಉಳಿಸಲು ಹಾಗೂ ಅಲ್ಲಿನ ಶೋಷಣೆಗಳ ವಿರುದ್ಧ ತನಿಖೆಗೆ ಆಗ್ರಹಿಸಿ ಮೈಸೂರಿನ ಗನ್ ಹೌಸ್ ಬಳಿ ಇರುವ ವಿಶ್ವಮಾನವ ಉದ್ಯಾನವನದ ಕುವೆಂಪು ಪ್ರತಿಮೆ ಬಳಿ ಸಿಎಫ್ ಟಿಆರ್ ಐ ಉಳಿಸಿ ಹೋರಾಟ ವೇದಿಕೆ ವತಿಯಿಂದ ಸಹಿ ಸಂಗ್ರಹ ಚಳುವಳಿಯನ್ನು ಹಮ್ಮಿಕೊಳ್ಳಲಾಗಿತ್ತು.

ಚಳುವಳಿಯಲ್ಲಿ ಪಾಲ್ಗೊಂಡ ಪ್ರಮುಖರು ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ಕನ್ನಡಿಗರ ಮೇಲೆ ಸಿಎಫ್ ಟಿಆರ್ ನಿರಂತರ ಶೋಷಣೆ ನಡೆಸುತ್ತಿದೆ. ಅಲ್ಲಿ ಕನ್ನಡಿಗರಿಗೆ ಪ್ರಾಧಾನ್ಯತೆ ನೀಡಬೇಕು. ಅನುಕೂಲ,ಸೌಲಭ್ಯ, ಭದ್ರತೆ ಕಲ್ಪಿಸಬೇಕು. ಕನ್ನಡಿಗರನ್ನು ಅಲ್ಲಿ ಕಡೆಗಣಿಸಲಾಗುತ್ತಿದೆ. ಈ ಮನೋಭಾವನೆಯನ್ನು ಬಿಟ್ಟು ಕನ್ನಡಿಗರಿಗೂ ಮಹತ್ವ ನೀಡಬೇಕು ಎಂದರು. ಇಲ್ಲಿ ನಡೆಯುತ್ತಿರುವ ತಮಿಳೀಕರಣ, ಗುಂಪುಗಾರಿಕೆ, ಭಿನ್ನಮತ ನಿಲ್ಲಬೇಕು ಎಂದು ಒತ್ತಾಯಿಸಿದರು.

ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಯುವ ಘಟಕದ ಅಧ್ಯಕ್ಷ ಹೆಚ್.ಬೀರಪ್ಪ, ವಿನೋದ್ ರಾಜ್ ಹಾಗೂ ಮೋಹನ್ ಕುಮಾರ್, ಕಸಾಪ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ, ಸಾಹಿತಿ ಸಿಪಿಕೆ, ಕಸಾಪ ಮಾಜಿ ಅಧ್ಯಕ್ಷ ಚಂದ್ರು, ಪತ್ರಿಕೋದ್ಯಮಿ ರಾಜಶೇಖರ್ ಕೋಟಿ ಮತ್ತಿತರರು ಪಾಲ್ಗೊಂಡಿದ್ದರು. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: