ದೇಶಪ್ರಮುಖ ಸುದ್ದಿ

ಮೊಬೈಲ್ ಸಿಗ್ನಲ್ ಸಿಗದೆ ಮರ ಹತ್ತಿದ ಕೇಂದ್ರ ಸಚಿವ ಮೇಘವಾಲ್

ದೇಶ (ಪ್ರಮುಖ ಸುದ್ದಿ) ಬಿಕಾನೇರ್, ಜೂನ್ 5 : ತಾವು ಆಯ್ಕೆಯಾದ ಸಂಸತ್ ಕ್ಷೇತ್ರಕ್ಕೆ ಭೇಟಿ ನೀಡಿದ ಕೇಂದ್ರ ಹಣಕಾಸು ರಾಜ್ಯ ಸಚಿವ ಅರ್ಜುನ್ ಮೇಘವಾಲ್ ಅವರು ಮೊಬೈಲ್ ಕರೆ ಮಾಡಲು ಸಿಗ್ನಲ್ ಸಿಗದ ಕಾರಣ ಮರ ಹತ್ತಿದ ಘಟನೆ ನಡೆದಿದೆ.

ಭಾನುವಾರ ತಮ್ಮ ಸ್ವಕ್ಷೇತ್ರವಾದ ಬಿಕಾನೇರ್‍ಗೆ ಆಗಮಿಸಿದ್ದ ಅವರು, ಕ್ಷೇತ್ರದ ಸಂಚಾರದಲ್ಲಿದ್ದಾಗ ಧೋಲಿಯಾ ಎಂಬ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಜನರ ಕುಂದುಕೊರತೆಯನ್ನು ಆಲಿಸಿದಾಗ ಅಲ್ಲಿದ್ದ ವ್ಯಕ್ತಿಯೊಬ್ಬ ತಮ್ಮ ಗ್ರಾಮದ ಬಳಿಯಿರುವ ಆಸ್ಪತ್ರೆಯಲ್ಲಿ ಶುಶ್ರೂಷಕಿಯರು ಇಲ್ಲ. ಹಾಗೂ ವೈದ್ಯರೂ ಇಲ್ಲ ಎಂದು ಹೇಳಿಕೊಂಡ. ಇದನ್ನು ಗಂಭೀರವಾಗಿ ತೆಗೆದುಕೊಂಡ ಕೇಂದ್ರ ಸಚಿವರು, ತಮ್ಮ ಫೋನ್ ಮುಖಾಂತರ ಆ ಕ್ಷೇತ್ರದ ವೈದ್ಯಾಧಿಕಾರಿಗೆ ಕರೆ ಮಾಡಿದರು. ಆದರೆ ಸಿಗ್ನಲ್ ಸಮಸ್ಯೆಯಿಂದ ಕರೆ ಮಾಡಲು ಸಾಧ್ಯವಾಗಲಿಲ್ಲ. ಸಿಗ್ನಲ್ ಕಡಿಮೆಯಾಗಿದ್ದನ್ನು ಗಮನಿಸಿದ ಅವರು, ಸ್ವಲ್ಪ ಎತ್ತರಕ್ಕೆ ಹಿಡಿದು ನೋಡಿದಾಗ ಸಿಗ್ನಲ್ ಏರುಪೇರಾಯ್ತು.

ತಾವಿರುವ ಸ್ಥಳದಿಂದ ಸ್ವಲ್ಪ ಎತ್ತರದ ಸ್ಥಳಕ್ಕೆ ಹೋಗಿ ಕರೆ ಮಾಡಿದರೆ ಸಿಗ್ನಲ್ ಚೆನ್ನಾಗಿ ಸಿಗುತ್ತದೆ ಎಂದು ಯೋಚಿಸಿದ ಎತ್ತರದ ಸ್ಥಳಕ್ಕಾಗಿ ಹುಡುಕಾಡಿದರು. ಆದರೆ ಅಲ್ಲಿ ಬೆಟ್ಟ ಗುಡ್ಡದಂಥ ಜಾಗ ಇರಲಿಲ್ಲ. ಗ್ರಾಮಸ್ಥರೊಬ್ಬರು ಮರ ಏರಿದರೆ ಸಿಗ್ನಲ್ ಸಿಗಬಹುದು ಎಂದು ಸಲಹೆ ನೀಡಿದರು. ತಕ್ಷಣವೇ ಏಣಿಯೊಂದಂದನ್ನು ತಂದು ಮರೆದ ಮೇಲೆ ಹತ್ತಿ ನಿಂತು ಕರೆ ಮಾಡಿದರು.

ಸಚಿವರ ಕ್ಷೇತ್ರ ಭೇಟಿಯ ಬಗ್ಗೆ ವರದಿ ಮಾಡಲು ಬಂದಿದ್ದ ಮಾಧ್ಯಮದವರಿಗೆ ಹಾಗೂ ಇದೆಲ್ಲಾ ಆಶ್ಚರ್ಯವಾಗಿ ಕಂಡಿತು. ಕೇಂದ್ರ ಸರ್ಕಾರ ಈಗ ಎಲ್ಲೆಡೆ ಡಿಜಿಟಲ್ ಇಂಡಿಯಾ ಮಂತ್ರ ಪಠಿಸುತ್ತಿದೆ. ಆದರೆ ಭಾರತದ ದೂರ ಸಂಪರ್ಕದ ನಕಾರಾತ್ಮಕ ಅಂಶಗಳನ್ನು ಈ ಘಟನೆ ಕಣ್ಣಿಗೆ ರಾಜುವಂತೆ ಮಾಡಿದೆ.

-ಎನ್.ಬಿ.ಎನ್.

Leave a Reply

comments

Related Articles

error: