ಮೈಸೂರು

ಸಸಿಗಳನ್ನು ನೆಟ್ಟು ಪೋಸಿದರೆ ಪರಿಸರ ರಕ್ಷಿಸಿದಂತೆ: ಧೃವಕುಮಾರ್

ಮೈಸೂರು, ಜೂ.೫: ಪರಿಸರ ಸಂರಕ್ಷಿಸಲು ವರ್ಷದಲ್ಲೊಂದು ದಿನ ಸಸಿಗಳನ್ನು ನೆಡುವಂತಾಗದೆ ವರ್ಷವಿಡೀ ಒಂದಿಲ್ಲೊಂದು ಕಡೆ ನೆಟ್ಟು ಪೋಸಿಸುವ ಸಂಸ್ಕೃತಿ ನಮ್ಮದಾಗಬೇಕಾಗಿದೆ ಎಂದು ಮುಡಾ ಅಧ್ಯಕ್ಷ ಡಿ.ಧೃವಕುಮಾರ್ ಅಭಿಪ್ರಾಯಪಟ್ಟರು.
ಸೋಮವಾರ ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ ಹಾಗೂ ಶೇಷಾದ್ರಿಪುರಂ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಮುಂಭಾಗದ ಹೆಬ್ಬಾಳು ವೃತ್ತ ರಸ್ತೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಬಳಿಕ ಮಾತನಾಡಿದ ಅವರು, ವಿಶ್ವ ಪರಿಸರ ದಿನಾಚರಣೆಗೆ ಮಾತ್ರ ಸೀಮಿತವಾಗದೆ ಸಸಿಗಳನ್ನು ನೆಡುವುದನ್ನು ಪರಿಸರ ಜಾಗೃತಿ ವೇದಿಕೆ ಅವಿಭಾಜ್ಯ ಅಂಗವಾಗಿ ಮಾಡಿಕೊಂಡಿರುವುದೇ ಅಲ್ಲದೆ ಅದನ್ನು ಪೋಸಿಸುವ ನಿಟ್ಟಿನಲ್ಲೂ ಕಾರ್ಯ ನಿರತವಾಗಿರುವುದನ್ನು ಶ್ಲಾಘಿಸಿದ ಅವರು ಪ್ರಾಧಿಕಾರದ ವತಿಯಿಂದಲೂ ಮುಂಬರುವ ದಿನಗಳಲ್ಲಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಮೃತ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕ ಮಹೇಶ್, ವೇದಿಕೆಯ ಕಾರ್ಯದರ್ಶಿ ಮ.ನ.ಲತಾಮೋಹನ್, ನಗರ ಪಾಲಿಕೆ ಸದಸ್ಯ ಶಿವಣ್ಣ, ಜೆಡಿಎಸ್‌ನ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಜಾತ ದುರ್ಗೇಶ್, ಶೇಷಾದ್ರಿಪುರಂ ಪದವಿ ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಈರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: