ಸುದ್ದಿ ಸಂಕ್ಷಿಪ್ತ

ಡಿ.ದೇವರಾಜ ಅರಸು ಪುಣ್ಯ ಸ್ಮರಣೆ ಜೂ.6ಕ್ಕೆ

ಮೈಸೂರು. ಜೂ.5 : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ದಿ.ದೇವರಾಜ ಅರಸು ಪುಣ್ಯ ಸ್ಮರಣೆಯಂಗವಾಗಿ ಡಿ.ದೇವರಾಜು ಅರಸು ಒಂದು ನೆನಪು ಹಾಗೂ ಅನ್ನಸಂತರ್ಪಣಾ ಕಾರ್ಯಕ್ರಮವನ್ನು ಜೂ.6ರಂದು ಮಧ್ಯಾಹ್ನ 12.30ಕ್ಕೆ ಜೆ.ಎಸ್.ಎಸ್. ಕಾಲೇಜು ಎದುರಿರುವ ಶಕ್ತಿಧಾಮದಲ್ಲಿ  ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಮೈಸೂರು ವಿವಿಯ ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ ಉದ್ಘಾಟಿಸುವರು, ಡಾ.ಮಹೇಶ್ ಚಂದ್ರಗುರು ಡಿ.ದೇವರಾಜ ಅರಸು ಕುರಿತು ಮಾತನಾಡುವರು, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಡಾ.ಬಿ.ಟಿ.ಬಾಣೇಗೌಡ, ಜಿಲ್ಲಾ ಶಸಾಪ ಅಧ್ಯಕ್ಷ ಎಂ.ಚಂದ್ರಶೇಖರ್, ಜಾಕೀರ್ ಹುಸೇನ್, ಹೆಚ್.ಬೀರಪ್ಪ, ದಲಿತ ವಿದ್ಯಾರ್ಥಿ ಒಕ್ಕೂಟ ಗೌರವಾಧ್ಯಕ್ಷ ಮಹೇಶ್ ಸೋಸಲೆ, ಕ.ಸಾ.ಪ ಉಪಾಧ್ಯಕ್ಷ ಎಸ್.ಚಂದ್ರಶೇಖರ್ ಹಾಗೂ ಇತರರು ಪಾಲ್ಗೊಳ್ಳುವರು.

ಅರಸು ಚಿಂತಕರ ಚಾವಡಿ :  ಜೂ.6ರಂದು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ಅವರ 35ನೇ ಪುಣ್ಯ ಸ್ಮರಣೆಯನ್ನು ಸಂಜೆ 5ಕ್ಕೆ ಹಮ್ಮಿಕೊಂಡಿದ್ದು ವಿಶ್ರಾಂತ ಆರ್.ಟಿ.ಓ ಬಾಲದೇವರಾಜೇ ಅರಸ್ ಉದ್ಘಾಟಿಸುವರು. ಅರಸು ಚಿಂತಕರ ಚಾವಡಿ ಅಧ್ಯಕ್ಷ ಕೆಂಪರಾಜೇ ಅರಸ್ ಅಧ್ಯಕ್ಷತೆ ವಹಿಸುವರು, ಭಾವಚಿತ್ರ ಅನಾವರಣ ಮತ್ತು ಸಾಧನೆಗಳ ಚುಟುಕು ಪರಿಚಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿ.ಸೋಮಶೇಖರ್ ನೆರವೇರಿಸುವರು. ಮುಖ್ಯ ಅತಿಥಿಯಾಗಿ ಸಮಾಜ ಕಲ್ಯಾಣದ ಜಂಟಿ ನಿರ್ದೇಶಕಿ ಬಿ.ಎಸ್.ಪ್ರಭಾ ಅರಸ್ ವಹಿಸುವರು ಎಂದು ಅರಸು ಚಿಂತಕರ ಚಾವಡಿಯೂ ತಿಳಿಸಿದೆ. (ಕೆ.ಎಂ.ಆರ್)

(ಕೆ.ಎಂ.ಆರ್)

Leave a Reply

comments

Related Articles

error: