Uncategorized

ವಿಶ್ವ ಪರಿಸರ ಸಪ್ತಾಹ ಜೂ.6ಕ್ಕೆ

ಮೈಸೂರು ಜೂ.5 : ದಿ ಕಂಟ್ರಿ ಇನ್ & ಸ್ಯೂಟ್, ಕಾರ್ಲಸ್ನ ಇವರು ವಿಶ್ವ ಪರಿಸರ ಸಪ್ತಾಹವನ್ನು ಜೂ.6ರಂದು ಹಮ್ಮಿಕೊಂಡಿದ್ದು ಸಪ್ತಾಹದ ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ಡಿ.ರಂದೀಪ್ ಭಾಗವಹಿಸವರು, ಮಹಾಪೌರ ಎಂ.ಜೆ.ರವಿಕುಮಾರ್, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಸೇಫ್ ವಿಲ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್, ಮೈಸೂರು ಸ್ಕೂಲ್ ಆಫ್ ಬ್ಯುಜಿನೆಸ್ ಅಧ್ಯಕ್ಷೆ ಡಾ.ಶಾಲಿನಿ ಹಾಗೂ ಕನ್ನಡ ಚಲನಚಿತ್ರ ನಟಿ ರೂಪಿಕಾ ಇವರನ್ನು ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು.

ಅಂದು ಬೆಳಿಗ್ಗೆ 6ಕ್ಕೆ ಕುಕ್ಕರಹಳ್ಳಿ ಕೆರೆಯಲ್ಲಿ 250 ಸಸಿ ನೆಡುವ , ಬೈಸಿಕಲ್ ರ್ಯಾಲಿ, ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಿ.ರಂದೀಪ್ ಚಾಲನೆ ನೀಡುವರು, ಮೇಯರ್ ಎಂ.ಜೆ.ರವಿಕುಮಾರ್ ಹಾಗೂ ಇತರ ಗಣ್ಯರು ಉಪಸ್ಥಿತರಿರುವರು. (ಕೆ.ಎಂ.ಆರ್)

Leave a Reply

comments

Related Articles

error: