ಮೈಸೂರು

ಗಾಂಧೀಜಿ ತತ್ವಾದರ್ಶಗಳನ್ನು ಪುನರ್ ಸ್ಥಾಪಿಸುವ ಕಾರ್ಯವಾಗಬೇಕಿದೆ

ಅತ್ಯಾಧುನಿಕ ಜೀವನಶೈಲಿಗೆ ಮಾರು ಹೋಗಿರುವ ಯುವಪೀಳಿಗೆ ತಮ್ಮ ತತ್ವಾದರ್ಶಗಳಿಂದಲೇ ಜಗತ್ತನ್ನು ಗೆದ್ದ ಮಹಾತ್ಮ ಗಾಂಧೀಜಿಯವರನ್ನೇ ಮರೆಯುತ್ತಿದ್ದಾರೆ. ಅವರ ವಿಚಾರಧಾರೆಗಳು ಕಣ್ಮರೆಯಾಗುತ್ತಿದ್ದು ಅವುಗಳನ್ನು ಪುನರ್ ಸ್ಥಾಪಿಸುವ ಕಾರ್ಯವಾಗಬೇಕಿದೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕಾರ್ಯದರ್ಶಿ ಪ್ರೊ.ಜೆ.ಬಿ.ಶಿವರಾಜು ಅಭಿಪ್ರಾಯಪಟ್ಟರು.

ಬುಧವಾರ ಮೈಸೂರು ವಿವಿ ಗಾಂಧಿ ಅಧ್ಯಯನ ಸಂಸ್ಥೆ ಹಾಗು ನಟರಾಜ ಮಹಿಳಾ ಕಾಲೇಜು ಕನ್ನಡ ವಿಭಾಗದ ಸಹಯೋಗದಲ್ಲಿ, ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಗಾಂಧೀಜಿ ಮತ್ತು ವ್ಯಕ್ತಿತ್ವ ವಿಕಸನ ಎಂಬ ವಿಷಚಿi ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಆಧುನೀಕರಣ ಹೆಚ್ಚುತ್ತಿದ್ದು, ಎಲ್ಲವು ಮೆಟಿರಿಯಲಿಸ್ಟಿಕ್ ಆಗಿವೆ. ಗೌತಮಬುದ್ಧ, ವಿವೇಕಾನಂದ, ಗಾಂಧೀಜಿ ಇವರುಗಳ ಉದಾಹರಣೆಗಳನ್ನು ಹೆಚ್ಚಾಗಿ ನೀಡುವ ಅಗತ್ಯವಿದೆ. ಇಂತಹ ಸಾಧಕರ, ಚಿಂತಕರ ವಿಚಾರಗಳಿಂದ, ಇಂದಿನ ಯುವ ಪೀಳಿಗೆಯ ಬದುಕು ಕಟ್ಟಿಕೊಡುವ ಪ್ರಯತ್ನ ಎಲ್ಲ ಹಿರಿಯ ಚಿಂತಕರು ಮಾಡಬೇಕು. ಇಂದಿನ ಯುವ ಪೀಳಿಗೆ ನಿಸ್ಪ್ರಯೋಜಕರಲ್ಲ. ಅವರನ್ನು ಸರಿ ದಾರಿಯಲ್ಲಿ ಮುನ್ನಡೆಸುವ ಕೆಲಸವಾಗಬೇಕಿದ್ದು, ಯಾಂತ್ರಿಕ ಬದುಕಿನಿಂದ ಹೊರಬರಬೇಕಾಗಿದೆ ಎಂದು ತಿಳಿಸಿದರು.

ಇಂದಿನ ಶಿಕ್ಷಣ ವ್ಯವಸ್ಥೆ ಕೇವಲ ಹಣದಿಂದ ಕೂಡಿದೆ. ಜೀವನದ ಮೌಲ್ಯ ಅರಿಯದೇ, ನಾಲ್ಕು ಗೋಡೆಗಳ ಮಧ್ಯೆ ಪಡೆಯುವ ಶಿಕ್ಷಣದಿಂದ ವಿದ್ಯಾರ್ಥಿ ಜೀವನವನ್ನು ರೂಪಿಸಿಕೊಳ್ಳಲಾಗುವುದಿಲ್ಲ. ಮೌಲ್ಯ ಹೊಂದದ ಶಿಕ್ಷಣ, ಶಿಕ್ಷಣವೇ ಅಲ್ಲ. ಗಾಂಧೀಜಿಯವರ ವಿಚಾರಗಳನ್ನು ಹೆಚ್ಚಾಗಿ ಅರಿಯಬೇಕು ಹಾಗೂ ಗಾಂಧಿ ವಿಚಾರಗಳನ್ನು ಒಳಗೊಂಡಿರುವ ಏಕೈಕ ರಾಷ್ಟ್ರ ನಮ್ಮದು. ೪೫೦ ಜೀವನ ಚರಿತ್ರೆಗಳು, ೩೦೦ಕ್ಕೂ ಹೆಚ್ಚು ಸ್ಟ್ಯಾಂಪ್‌ಗಳು, ಪಠ್ಯ ಪುಸ್ತಕಗಳಲ್ಲಿ ಅವರ ಬಗ್ಗೆ ವಿಚಾರಗಳು ಹೀಗೆ ಹಲವಾರು ರೀತಿಯಲ್ಲಿ ಗಾಂಧೀಜಿ ನಮ್ಮ ದೇಶದಲ್ಲಿ ಇನ್ನೂ ಜೀವಂತವಾಗಿದ್ದಾರೆ. ಸರ್ಕಾರ ಪ್ರತಿ ಜಿಲ್ಲೆಯಲ್ಲು ಗಾಂಧಿಭವನ ನಿರ್ಮಾಣವಾಗಬೇಕು ಎಂಬ ಉದ್ದೇಶದಿಂದ ೧೫೦ ಕೋಟಿ ರೂ ಹಣ ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡಿದರು.

ಮೈಸೂರು ವಿವಿ ಗಾಂಧಿ ಭವನದ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ, ನಟರಾಜ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಜಿ.ಪ್ರಸಾದ್‌ಮೂರ್ತಿ, ಪ್ರಾಂಶುಪಾಲೆ ಪ್ರೊ.ಎಂ.ಶಾರದಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

 

Leave a Reply

comments

Related Articles

error: